ಜ. 4ರಂದು ನಿಧನರಾದ ಅಮರಮುಡ್ನೂರು ಗ್ರಾಮದ ಬೊಳ್ಳೂರು ಜಯರಾಮ ಗೌಡರಿಗೆ ಶ್ರದ್ಧಾಂಜಲಿ ಸಭೆ ಜ. 15ರಂದು ಮೃತರ ಸ್ವಗೃಹ ಬೊಳ್ಳೂರಿನ ದೇವಿಕೃಪಾ ದಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲರಾದ
ಕೆ.ಎಂ. ದೇವಿದಾಸ ಗೌಡ ಮೃತರಿಗೆ ನುಡಿನಮನ ಸಲ್ಲಿಸಿದರು.
ಗಿರೀಶ್ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು. ಮೃತರ ಪತ್ನಿ ಶ್ರೀಮತಿ ಪುಷ್ಪಾವತಿ ಬೊಳ್ಳೂರು, ಪುತ್ರ ದಿನೇಶ್ ಬೊಳ್ಳೂರು, ಸೊಸೆ ರೇಷ್ಮಾ, ಪುತ್ರಿಯರಾದ ಶ್ರೀಮತಿ ವಿದ್ಯಾವತಿ ಶಿವಾನಂದ ಕರಿಂಕ, ಶ್ರೀಮತಿ ನಮಿತಾ ವಾಸುದೇವ ಗೆಜ್ಜೆಮನೆ, ಶ್ರೀಮತಿ ರೂಪಶ್ರೀ ದಿನೇಶ್ ನಿಡ್ಡಾಜೆ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.