ಕೊಡಿಯಾಲ ಕಲ್ಪಡಶ್ರೀ ಉಳ್ಳಾಕುಲು ,ಚಾಮುಂಡಿ, ಮತ್ತು ಪರಿವಾರ ದೈವಗಳ ನೇಮೋತ್ಸವ

0

ಕೊಡಿಯಾಲದ ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ
ನಾಗತಂಬಿಲ, ಆಶ್ಲೇಷ ಬಲಿ ಮತ್ತು ಶ್ರೀ ಉಳ್ಳಾಕುಲು, ಚಾಮುಂಡಿ‌ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವವು ಜ.14 ಮತ್ತು ಜ.15 ರಂದು ಭಕ್ತಿ,ಸಂಭ್ರಮದಿಂದ ನಡೆಯಿತು.


ಜ.13 ರಂದು ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಉಡುಪಿ ಶ್ರೀ ರಾಮ ತೀರ್ಥ ಮಠ ಕಾಣಿಯೂರು, ಇವರು ಆಶೀರ್ವಚನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜ.14 ರಂದು ಬೆಳಿಗ್ಗೆ ಆಶ್ಲೇಷ ಬಲಿ , ನಾಗತಂಬಿಲ ನಡೆಯಿತು.


ಮದ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ಉಳ್ಳಾಕುಲು,ಚಾಮುಂಡಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯಲಾಯಿತು.ಬಳಿಕ ರಾತ್ರಿ ಭಜನೆ ಮತ್ತು ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.
ಜ.15ರಂದು ಬೆಳಿಗ್ಗೆ ಶ್ರೀ ಉಳ್ಳಾಕುಲು, ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಭಕ್ತಿ,ಸಂಭ್ರಮದಿಂದ ನಡೆಯಿತು.
ಬಳಿಕ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ
ಮೊಕ್ತೇಸರರಾದ ಶಿವರಾಮ ಉಪಾಧ್ಯಾಯ ಕಲ್ಪಡ, ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ. ಎಂ., ಕಾರ್ಯದರ್ಶಿ ಬಾಲಕೃಷ್ಣ ಕೆ.ಜಿ,ಉಪಾಧ್ಯಕ್ಷ ಯುವರಾಜ ಕೆ.ಸಿ,ಜೊತೆ ಕಾರ್ಯದರ್ಶಿ ಧರ್ಮಪಾಲ ಕೆ, ಮತ್ತು ಎಂಟು ಮನೆಯವರು ಹಾಗೂ ಊರವರು ಆಡಳಿತ ಮಂಡಳಿಯ ಸರ್ವಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.