ಮಂಗಳೂರಿನ ಕೋಣಾಜೆಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ, ವಿದ್ವಾಂಸ ಡಾ. ಪ್ರಭಾಕರ ಶಿಶಿಲರವರಿಗೆ ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ಜ.15ರಂದು ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಯಲ್ಲಿ ನಡೆಯಿತು.
ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಸಾಹಿತಿ ಎಚ್. ಭೀಮರಾವ್ ವಾಷ್ಠರ್ ರವರು ಡಾ. ಪ್ರಭಾಕರ್ ಶಿಶಿಲ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಚಂದನ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಸುಮಂಗಲ ಲಕ್ಷ್ಮಣ್ ಕೋಳಿವಾಡ, ಪ್ರಿಯಾ ಸುಳ್ಯ, ಸುದ್ದಿ ಬಳಗದ ಹರೀಶ್ ಬಂಟ್ವಾಳ್, ದುರ್ಗಾಕುಮಾರ್ ನಾಯರ್ ಕೆರೆ, ಶ್ರೀಧರ್ ಕಜೆಗದ್ದೆ, ಯಶ್ವಿತ್ ಕಾಳಮ್ಮನೆ, ಅನಿಲ್ ಕಳಂಜ, ಅನಿಲ್ ಸಂಪ, ಮೇಘ ಕೃಷ್ಣ ಮೊದಲಾದವರಿದ್ದರು.