ಜಾಲ್ಸೂರು: ಮಹಾಬಲಡ್ಕ ಕಾಂಪ್ಲೆಕ್ಸ್ ವಠಾರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಜಾಲ್ಸೂರು ಪೇಟೆಯಲ್ಲಿರುವ ಮಹಾಬಲಡ್ಕ ಕಾಂಪ್ಲೆಕ್ಸ್ ವಠಾರದಲ್ಲಿ 76ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಆ.15ರಂದು ನಡೆಸಲಾಯಿತು.


ಕನಕಮಜಲು ಸಹಕಾರಿ ಸಂಘದ ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗಂಗಾಧರ ಗೌಡ ಕಾಳಮನೆ ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು. ಬಳಿಕ ಕಾಂಪ್ಲೆಕ್ಸ್ ಆವರಣದಲ್ಲಿ ಗಿಡನೆಟ್ಟು ವನಮಹೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿರುವ ಅಂಗಡಿ ಮಾಲಕರುಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಬನಾರಿ ಇಲೆಕ್ಟ್ರಿಕಲ್ ಮಾಲಕ ನಂದಕಿಶೋರ್ ವಂದಿಸಿದರು. ಬೆನಕ ಗಿಫ್ಟ್ ಸೆಂಟರ್ ಮಾಲಕ
ಎಂ.ಎಸ್. ಶ್ಯಾಮ್ ಕುಮಾರ್ ಮರಸಂಕ ಕಾರ್ಯಕ್ರಮ ನಿರೂಪಿಸಿದರು.