ಸುಣ್ಣಮೂಲೆ: ಅಹ್ಮದುಲ್ ಬದವಿ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಕನಕಮಜಲು ಗ್ರಾಮದ ಸುಣ್ಣಮೂಲೆ ಅಹ್ಮದುಲ್ ಬದವಿ ಜುಮ್ಮಾ ಮಸೀದಿಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ಆಚರಿಸಲಾಯಿತು.

0

ಅಹ್ಮದುಲ್ ಬದವಿ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ರಹಮಾನ್ ಸಖಾಪಿ ಹಾಗೂ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಮಾನ್ ಸಹದಿ ಅವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಶುಭಹಾರೈಸಿದರು.


ಅಬ್ದುಲ್ ರಹಮಾನ್ ಸಖಾಪಿ ಹಾಗೂ ಅಬ್ದುಲ್ ಹಮೀದ್ ಗೌಸಿಯ ಅವರು ಸ್ವಾತಂತ್ರ್ಯ ಹೋರಾಟಗಾರ ಕುರಿತು ಮದ್ರಸ ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರು, ಮಸೀದಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಎಸ್.ಎಸ್.ಎಫ್. ಎಸ್.ಬಿ.ಎಸ್. ಪದಾಧಿಕಾರಿಗಳು ಉಪಸ್ಥಿತರಿದ್ದರು.