ಕೂತ್ಕುಂಜ : ಸನ್ಮಾನ ಕಾರ್ಯಕ್ರಮ

0

ಶ್ರೀ ದುರ್ಗಾ ಮಹಿಳಾ ಮಂಡಲ ಕೂತ್ಕುಂಜ, ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್, ಧರ್ಮಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್, ಧನುಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್ , ದುರ್ಗಾಶ್ರೀ ಆತ್ಮ ರೈತ ಸಂಘ ಚಿದ್ಗಲ್, ಚಿಗುರು ಮಹಿಳಾ ನವೋದಯ ಸಂಘ ಅಡ್ಡತೋಡು ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸನ್ಮಾನ ಕಾರ್ಯಕ್ರಮವು ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ರವರ ನಿವಾಸದಲ್ಲಿ ಕಾರ್ಯಕ್ರಮ ನಡೆಯಿತು .

ಡಾ. ರಾಮಯ್ಯ ಭಟ್ ಪಂಜ ಕಾರ್ಯಕ್ರಮ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಶ್ರೀಮತಿ ವೀಣಾ ಗಿರಿಧರ ಇಟ್ಯಡ್ಕ (ಕಾರ್ಯದರ್ಶಿ ಶ್ರೀ ದುರ್ಗಾ ಮಹಿಳಾಮಂಡಲ ಕೂತ್ಕುಂಜ ) ವಹಿಸಿದ್ದರು. ಅತಿಥಿಗಳಾಗಿ ಕಾರ್ಯಪ್ಪ ಗೌಡ ಚಿದ್ಗಲ್ ( ಪೂರ್ವಾಧ್ಯಕ್ಷರು ಗ್ರಾಮ:ಪಂಚಾಯತು ಪಂಜ) ಭಾಗವಹಿಸಿದ್ದರು.

ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಗೌಡ ಚಿದ್ಗಲ್ ( ಅಧ್ಯಕ್ಷರು ಮಹಿಳಾ ಮಂಡಲದ ಸಂಘಟನೆ ಹಾಗೂ ಶ್ರೀದೇವಿ ಸಂಜೀವಿನಿ ಚಿದ್ಗಲ್ ಧರ್ಮಶ್ರೀ ಮಹಿಳಾ ನವೋದಯ ಹಾಗೂ ದುರ್ಗಾಶ್ರೀ ರೈತ ಸಂಘ ಚಿದ್ಗಲ್ ) ಶ್ರೀಮತಿ ಹೇಮಾ ವಸಂತ್ ಚಿದ್ಗಲ್ ( ಅಧ್ಯಕ್ಷರು ಧನುಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್ ) ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ವೇದಾವತಿ ಬಾಲಕೃಷ್ಣ ಹೊಸೋಕ್ಲು ಚಿದ್ಗಲ್ ರವರು ಪ್ರಾರ್ಥಿಸಿದರು . ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ರವರು ಸ್ವಾಗತಿಸಿದರು .ಡಾ ಯಂ ರಾಮಯ್ಯ ಭಟ್ ಹಾಗೂ ಪಂಜ ಗ್ರಾಮ ಪಂಚಾಯತಿನ ಪೂರ್ವಾಧ್ಯಕ್ಷರಾದ ಕಾರ್ಯಪ್ಪ ಗೌಡ ಚಿದ್ಗಲ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಪತ್ರವನ್ನು ನೀಡಿ ಗೌರವಿಸಲಾಯಿತು.
ಸುಶ್ಮಿತಾ ಆದಿತ್ಯ ಚಿದ್ಗಲ್ ರವರು ಕಾರ್ಯಕ್ರಮ ನಿರೂಪಿಸಿದರು . ಹೇಮಾ ವಸಂತ್ ಚಿದ್ಗಲ್ ರವರು ವಂದಿಸಿದರು. ಜಂಟಿ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.