ರಾಜೀವ ಗಾಂಧಿ ವಿ.ವಿ.ಯ ಭಾರತೀಯ ವೈದ್ಯಕೀಯ ವ್ಯವಸ್ಥೆ ವಿಭಾಗದ ಸದಸ್ಯರಾಗಿ ಡಾ. ಸ್ಮಿತಾ ವಿನಯರಾಜ್ ಮಡ್ತಿಲ

0

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೆಂಗಳೂರು ಇದರ ಭಾರತೀಯ ವೈದ್ಯಕೀಯ ವ್ಯವಸ್ಥೆ ವಿಭಾಗದ ಸದಸ್ಯರಾಗಿ ಸುಳ್ಯದ ಕೆ.ವಿ.ಜಿ.ಆಯುರ್ವೇದ ಮಹಾ ವಿದ್ಯಾಲಯದ ಪಂಚ ಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸ್ಮಿತಾ ವಿನಯರಾಜ್ ಮಡ್ತಿಲ ಅವರನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಉಪಕುಲಪತಿಗಳು ನೇಮಕ ಮಾಡಿ ಆದೇಶಿಸಿದ್ದಾರೆ.

ಸುಳ್ಯ ಕಸಬಾ ಗ್ರಾಮದ ಪೂಜಾರಿಮನೆ ಕಾರ್ಯಪ್ಪ ಗೌಡ ಮತ್ತು ಯಶೋದಾ ದಂಪತಿಯ ಪುತ್ರಿಯಾದ ಡಾ. ಸ್ಮಿತಾ ಅವರು ಸುಳ್ಯದ ಮಾಟ್ರಿಕ್ಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿನಯರಾಜ್ ಮಡ್ತಿಲ ಅವರ ಪತ್ನಿ.