ಬೆಳ್ಳಾರೆ ಪೇಟೆಯಲ್ಲಿ ಆಡುಗಳ ಸಂಚಾರ – ವಾಹನ ಸವಾರರಿಗೆ ತೊಂದರೆ

0

ಬೆಳ್ಳಾರೆ ಪೇಟೆಯ ರಸ್ತೆಯಲ್ಲಿ ಆಡುಗಳ ಸಂಚಾರ ಹೆಚ್ಚಾಗಿದ್ದು ವಸಹನ ಸವಾರರಿಗೆ ಸಮಸ್ಯೆಯಾಗಿದೆ. ರಸ್ತೆಯಲ್ಲಿ ಓಡಾಡುವ ಆಡುಗಳಿಂದ ಬೈಕ್ ಸವಾರರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆಗಳು ಇತ್ತೀಚೆಗೆ ನಡೆದಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಆಡುಗಳನ್ನು ಬಿಡುವುದರಿಂದ ಅಂಗಡಿಯವರಿಗೂ ಸಮಸ್ಯೆಯಾಗುತ್ತಿದೆ.ಈ ಬಗ್ಗೆ ಸಾರ್ವಜನಿಕರು ಗ್ರಾ.ಪಂ.ಗೆ ಮನವಿ ನೀಡಿರುವುದಾಗಿ ತಿಳಿದು ಬಂದಿದೆ.