ರಾಮಚಂದ್ರ ರಾವ್ ಪೆರುವಾಜೆ ನಿಧನ

0

ಪೆರುವಾಜೆ ಗ್ರಾಮದ ಶ್ರೀ ಜಲದುರ್ಗಾ ದೇವಿ ದೇವಾಲಯದ ಸಮೀಪದ ನಿವಾಸಿ ರಾಮಚಂದ್ರ ರಾವ್ ಪೆರುವಾಜೆ ಹೃದಯಾಘಾತದಿಂದ ಆ. 29ರಂದು ನಿಧನರಾದರು. ಇವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಅನುಸೂಯಾ, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪುತ್ರಿ ಶ್ರೀಮತಿ ನಿವೇದಿತಾ ಗಿರೀಶ್, ಓರ್ವ ಸಹೋದರ ವೆಂಕಟಕೃಷ್ಣ ರಾವ್ ಪೆರುವಾಜೆ, ಸಹೋದರಿಯರಾದ ಶ್ರೀಮತಿ ಕೃಷ್ಣ ಕುಮಾರಿ ಬಳ್ಪ, ಶ್ರೀಮತಿ ರಾಜೇಶ್ವರಿ ಎಲ್ಲೂರು, ಕುಕ್ಕಿಕಟ್ಟೆ, ಶ್ರೀಮತಿ ಶಶಿಕಲಾ ಬೆಂಗಳೂರು ಸೇರಿದಂತೆ ಕುಟುಂಬಸ್ಥರು, ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.