ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಪೂರ್ವಾಶ್ರಮದ ತಾಯಿ, ಚೆoಬು ಗ್ರಾಮದ ಚೆಂಡಡ್ಕ ದಿ. ವೆಂಕಪ್ಪ ಚೆಂಡಡ್ಕರವರ ಪತ್ನಿ ಗಂಗಮ್ಮರವರು ಅಲ್ಪಕಾಲದ ಅಸೌಖ್ಯದಿಂದ ನ. 22ರಂದು ಬೆಳಗ್ಗೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.
ನಾಟಿವೈದ್ಯರಾಗಿದ್ದ ಅವರು ಅನೇಕ ಮಹಿಳೆಯರಿಗೆ ಹೆರಿಗೆ ಮಾಡಿಯೂ ಪ್ರಸಿದ್ಧರಾಗಿದ್ದರು.
ಮಕ್ಕಳಾದ ಮಾಚಯ್ಯ, ಮನೋಹರ, ಕುಸುಮಾಕರ, ನೇತ್ರಾವತಿ, ಪುಷ್ಪಾವತಿ, ಸವಿತಾ, ದೇಶ್‌ಕುಮಾರ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ., ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನ ಇಂದು ಚೆಂಬು ಕೂಡಡ್ಕ ಶಾಲೆಯ ರಂಗಮಂದಿರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.