ಅಧ್ಯಕ್ಷರಾಗಿ ಎನ್.ಸಿ.ಅನಂತ – ಉಪಾಧ್ಯಕ್ಷರಾಗಿ ಯಶವಂತ ಡಿ.ಡಿ.
ಕೊಡಗು ಸಂಪಾಜೆ ಪಯಸ್ವಿನಿ ಸೊಸೈಟಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಿತು. ಅಧ್ಯಕ್ಷರಾಗಿ ಎನ್.ಸಿ.ಅನಂತ, ಉಪಾಧ್ಯಕ್ಷರಾಗಿ ಯಶವಂತ ಡಿ.ಡಿ. ಆಯ್ಕೆಯಾದರು. ಇಂದು ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಎನ್.ಸಿ.ಅನಂತ, ಉಪಾಧ್ಯಕ್ಷ ಸ್ಥಾನಕ್ಕೆ ಯಶವಂತ ಡಿ.ಡಿ. ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನದ ಎನ್.ಸಿ. ಅನಂತರನ್ನು ರಾಮಮೂರ್ತಿ ಸೂಚಿಸಿ, ವಸಂತರವರು ಅನುಮೋದಿಸಿದರು. ಉಪಾಧ್ಯಕ್ಷ ಯಶವಂತರನ್ನು ಪಕೀರವರು ಸೂಚಿ, ಪುಂಡರೀಕರವರು ಅನುಮೋದಿಸಿದರು. ಚುನವಣಾಧಿಕಾರಿ ಸಿದ್ದಲಿಂಗಮೂರ್ತಿ, ಕಾರ್ಯನಿರ್ವಹಣಾಧಿಕಾರಿ ಆನಂದ ಬಿ. ಕೆ. ಉಪಸ್ಥಿತರಿದ್ದರು.