ಜ.9ರ ಪ್ರತಿಭಟನೆ ಕೈ ಬಿಟ್ಟ ನಾಯಕರು
ಆಲೆಟ್ಟಿ – ರಥಬೀದಿ ರಸ್ತೆಯ ಅವ್ಯವಸ್ಥೆಯನ್ನು ಸರಿ ಪಡಿಸಬೇಕು. ಇಲ್ಲವಾದಲ್ಲಿ ಜ.9ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ನಾಯಕರ ಮನವಿಗೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರು ಜ.8ರಂದು ನಾಯಕರನ್ನು ಕಂಡು ರಸ್ತೆ ತುರ್ತು ರಿಪೇರಿಯ ಭರವಸೆ ನೀಡಿದ್ದರಿಂದ ಜ.9ರ ಸಂಜೆ ನಡೆಸಲುದ್ದೇಶಿಸಿದ್ದ ಪ್ರತಿಭಟನೆ ಕೈ ಬಿಡಲಾಗಿದೆ ಎಂದು ತಿಳಿದುಬಂದಿದೆ.
ಜ.8ರಂದು ಸಂಜೆ ಕಾಮಗಾರಿ ವಹಿಸಿಕೊಂಡ ಟೆಂಡರ್ ದಾರರು ನಮ್ಮನ್ನು ಕರೆದು ರಸ್ತೆಯನ್ನು ರಥಬೀದಿ ಭಾಗದಲ್ಲಿ ಡಾಮರೀಕರಣ ಮತ್ತು ಗಾಂಧಿನಗರದಲ್ಲಿ ಹಿಟಾಚಿ ಮೂಲಕ ಸಮತಟ್ಟು ಮಾಡಿ, ದಿನದಲ್ಲಿ 2 ಸಲ ಟ್ಯಾಂಕಕರ್ ಮೂಲಕ ನೀರು ಹಾಕುವುದಾಗಿ ಒಪ್ಪಿ, ಜಲ್ಲಿ ಕೆಲಸ ಮತ್ತು ನೀರು ಹಾಕುವ ಕೆಲಸವನ್ನು ಪ್ರಾರಂಭ ಮಾಡಿರುತ್ತಾರೆ. ಆದುದರಿಂದ ಜ.9ರ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಪಿ. ಎಸ್ ಗಂಗಾಧರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ ಮಾತುಕತೆಯಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ಎಂ ವೆಂಕಪ್ಪ ಗೌಡ, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಉಮ್ಮರ್, ಧೀರ ಕ್ರಾಸ್ತಾ, ಸಿದ್ದಿಕ್ ಕೋಕೋ, ಕೆ. ಎಂ. ಮುಸ್ತಾಫಾ, ಶಾಹಿದ್ ಪಾರೆ, ಶಿವರಾಮ ಎಂ. ಪಿ . ಉಬರಡ್ಕ ಗುತ್ತಿಗೆದಾರರ ಪರವಾಗಿ ಚೆಲುವರಾಜು ಉಪಸ್ಥಿತರಿದ್ದರು.