ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ( NPEP) ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದೆ. ಸಮೂಹ ಮಾಧ್ಯಮಗಳ ಸುರಕ್ಷಿತ ಬಳಕೆ ಎಂಬ ವಿಷಯದ ಮೇಲೆ ಆಂಗ್ಲ ಭಾಷಾಯಲ್ಲಿ ಪ್ರಸ್ತುತ ಪಡೆಸಿದ ಪಾತ್ರಾಭಿನಯವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರು ರಚಿಸಿ ನಿರ್ದೇಶನ ಮಾಡಿದ್ದರು. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಸುಳ್ಯದ ಕುರುಂಜಿಗುಡ್ಡೆ ನಿವಾಸಿ ಗಣಪತಿ ಭಟ್ ಕೆ.ಆರ್ ಮತ್ತು ಶಾರದಾ ಎಸ್. ಇವರ ಪುತ್ರಿ ಪೌರ್ಣಮಿ ಕೆ, ಆಲೆಟ್ಟಿಯ ನಿವಾಸಿ ಚಿನ್ನಪ್ಪ ಗೌಡ ಎಂ. ಹಾಗು ಲಲಿತಾ ಡಿ. ಇವರ ಪುತ್ರಿ ಹಿಮಾದ್ರಿ ಸಿ.ಎಮ್., ಕಾಯರ್ತೋಡಿಯ ತೀರ್ಥರಾಮ ಕೆ.ಜಿ. ಹಾಗು ಕಲಾವತಿ ಟಿ ಇವರ ಸುಪುತ್ರಿ ತನ್ವಿ ಕೆ.ಟಿ., ಜಾಲ್ಸೂರಿನ ನಿವಾಸಿ ದಾಮೋದರ ಎಂ. ಹಾಗು ಶೀಲಾವತಿ ಎಸ್. ಇವರ ಪುತ್ರಿ ಅಶ್ವಿತಾ ಎಂ.ಡಿ., ಪೈಲಾರು ಶಶಿಕುಮಾರ್ ಜಿ ಹಾಗು ಕವಿತಾ ಎಸ್ ಇವರ ಪುತ್ರಿ ಗಹನಾ ಎಸ್. ಇವರನ್ನೊಳಗೊಂಡ ವಿಜೇತ ತಂಡದ ಮಾರ್ಗದರ್ಶಕರಾಗಿ ಸಮಾಜವಿಜ್ಞಾನ ಶಿಕ್ಷಕರಾದ ಪೂರ್ಣಿಮಾ ಟಿ ಹಾಗು ಗಣಿತ ಶಿಕ್ಷಕರಾದ ಲತಾ ವೆಂಕಟೇಶ ಪೈ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಮೂವತ್ತೆರಡು ತಂಡಗಳು ಭಾಗವಹಿಸಿದ್ದವು.
ಸಂಸ್ಥೆಯ ಈ ಸಾಧನೆಯನ್ನು ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ, ಡಿ.ಎಸ್.ಇ.ಆರ್.ಟಿ. ಬೆಂಗಳೂರು ಇದರ ನಿರ್ದೇಶಕರಾದ ಗೋಪಾಲಕೃಷ್ಣ, ಜಿಲ್ಲಾ ಉಪನರ್ದೇಶಕರಾದ ರಾಜಲಕ್ಷ್ಮಿ, ಸುಳ್ಯ ತಹಶೀಲ್ದಾರರಾದ ಮಂಜುಳಾ ಇವರು ಪ್ರಶಂಸಿಸಿದ್ದಾರೆ.