ಎಡಮಂಗಲ ಗ್ರಾಮದ ದೇರಳ ಮನೆಯ ಪದ್ಮಯ್ಯ ನಾಯ್ಕ್ ( 70 ) ಎಂಬವರು ನಿನ್ನೆ ಬೆಳಿಗ್ಗೆ ರೈಲ್ವೆ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರೈಲು ತಾಗಿದ್ದು, ಭುಜಕ್ಕೆ ತೀವ್ರ ಜಖಂ ಆಗಿರುವುದಾಗಿ ವರದಿಯಾಗಿದೆ.
ರೈಲುಮಾರ್ಗದ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರೈಲು ಬಂದುದು ಪದ್ಮಯ್ಯ ನಾಯ್ಕ್ ರಿಗೆ ಗೊತ್ತಾಗಲಿಲ್ಲವೆನ್ನಲಾಗಿದೆ. ರೈಲು ಒರೆಸಿಕೊಂಕೊಂಡು ಹೋದಾಗ ಇವರು ಆಯ ತಪ್ಪಿ ಕೆಳಗಡೆಗೆ ಚರಂಡಿಗೆ ಬಿದ್ದರೆಂದೂ ಪರಿಣಾಮವಾಗಿ ಇವರ ಭುಜದ ಎಲುಬು ಮುರಿಯಿತೆಂದೂ ಹೇಳಲಾಗುತ್ತಿದೆ.
ಪದ್ಮಯ್ಯ ನಾಯ್ಕರನ್ನು ಪುತ್ತೂರು ಸರಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ.