ಇತಿಹಾಸ ಪ್ರಸಿದ್ದ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಶ್ರೀ ದೇವರ ಪಟ್ಟಣ ಸವಾರಿಯ ವೈಭವದ ಪೂಜೆ ಹೊಸಗದ್ದೆ ಬಳಿ ವಸಂತ ಕಟ್ಟೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಪಟ್ಟಣ ಸವಾರಿ ಬರುವ ಮುನ್ನ ವಿವಿಧ ಭಜನಾ ತಂಡಗಳಿಂದ ಶ್ರೀ ದೇವರ ಭಜನೆ ಭಕ್ತಿಯಿಂದ ನಡೆಯಿತು.
ಈ ಸಂಧರ್ಭದಲ್ಲಿ ಜಯನಗರ, ಹಳೆಗೇಟು, ಬೆಟ್ಟಂಪ್ಪಾಡಿ,ಹೊಸಗದ್ದೆ ಭಾಗದ ನೂರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.
ಕಾರ್ಯಕ್ರಮಕ್ಕೆ ಸ್ಥಳೀಯ ಮುಖಂಡರು ಗಳಾದ ಕೇಶವ ಮಾಸ್ತರ್, ಶಿವನಾಥ್ ರಾವ್,ರಾಕೇಶ್ ಕುಂಟಿಕ್ಕಾನ, ಕಸ್ತೂರಿ ಶಂಕರ್,ಮೊದಲಾದವರು ನೇತೃತ್ವ ವಹಿಸಿದ್ದರು.