ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ
ನಾಯಕವಾಡಿ, ಕುಂದಾಪುರ ಹಾಗೂ
ವೈಷ್ಣವಿ ಇವೆಂಟ್ಸ್ ಇವರ ಸಹಯೋಗದಲ್ಲಿ ಸುವರ್ಣ ಸಂಭ್ರಮ 2025 ಇದರ ಪ್ರಯುಕ್ತ ನಡೆಸಿದ ಅಂತರ್ ರಾಜ್ಯ ಮಟ್ಟದ “ಗಾನ ಸಂಭ್ರಮ 2025” ಇದರಲ್ಲಿ ಸುಳ್ಯದ ‘ಅಶ್ವಿಜ್ ಅತ್ರೇಯ’ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಸ್ಪರ್ಧೆಯ ನಿರ್ಣಾಯಕರಾಗಿ ಝೀ ಕನ್ನಡ ಸರಿಗಮಪ ಇದರ ‘ಕಂಬದ ರಂಗಯ್ಯ’ ‘ಪೃಥ್ವಿ ಭಟ್ ‘ ‘ವಿನುಷ್ ಭಾರಧ್ವಜ್ ‘ ಸಹಕರಿಸಿರುತ್ತಾರೆ.
ಅಡಿಷನ್ ನಲ್ಲಿ 72 ಮಂದಿ ಭಾಗವಹಿಸಿದ್ದು ಮುಂದಿನ ಹಂತಕ್ಕೆ ಟಾಪ್ 13 ಸ್ಪರ್ಧಿಗಳು ಆಯ್ಕೆ ಆಗಿ ಮುಂದಿನ ಹಂತ ಸೆಮಿಫಿನಾಲೆ ಮತ್ತು ಫಿನಾಲೆ ಅದ್ದೂರಿ ವೇದಿಕೆಯಲ್ಲಿ ನಡೆಯಿತು.
“ ರಜತ್ ಮಯ್ಯ, ಶಿವಾನಿ ನವೀನ್, ಪಲ್ಲವಿ ಪ್ರಭು” ರವರು ಊರಿನ ಜನತೆಯ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ಇವರು ಸುಳ್ಯದ ಪ್ರಭು ಬುಕ್ ಸೆಂಟರ್ ಮಾಲಕರಾದ ಉಷಾ ಕುಮಾರಿ ಮತ್ತು ರಾಮಚಂದ್ರ ದಂಪತಿ ಪುತ್ರ .
ಸೈಂಟ್ ಜೋಸೆಪ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿರುವ ಇವರು ಗಾನಸಿರಿ ಸುಗಮ ಸಂಗೀತ ಕಲಾಕೇಂದ್ರ ಸುಳ್ಯ ಮತ್ತು ಸುನಾದ ಶಾಸ್ತ್ರೀಯ ಸಂಗೀತ ಶಾಲೆಯಲ್ಲಿ ಕಲಿಯುತ್ತಿದ್ದಾರೆ.