ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ 2025 ಜ.12ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ. ದಿನ ಪೂರ್ತಿ ನಡೆಯುವ ಸಂಗೀತ ಸಂಭ್ರಮದಲ್ಲಿ ಬೆಳಗ್ಗೆ 9.3೦ರಿಂದ ದೀಪೋಜ್ವಲನ, ಗುರುವಂದನೆ ಮತ್ತು ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ.
ಸಂಜೆ ಗಂಟೆ 6 ರಿಂದ ವಿದ್ವಾನ್ ಟಿ.ವಿ. ರಾಮ್‌ಪ್ರಸಾದ್ ಹಾಗೂ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ವಯಲಿನ್ – ವಿದ್ವಾನ್ ತ್ರಿವೆಂಡ್ರಮ್ ಎನ್. ಸಂಪತ್, ಮೃದಂಗ – ವಿದ್ವಾನ್ ಕಾಂಚನ ಎ. ಈಶ್ವರ ಭಟ್, ಘಟಂ – ವಿದ್ವಾನ್ ಉಡುಪಿ ಶ್ರೀಧರ್ ತ್ರಿವೆಂಡ್ರಂ ವಾದಿಸಲಿದ್ದಾರೆ.