ಕಲ್ಮಡ್ಕ:ಕು.ಪ್ರಣತಿ ಜೋಗಿಬೆಟ್ಟು ಭರತನಾಟ್ಯದಲ್ಲಿ ಡಿಸ್ಟಿಂಕ್ಷನ್

0

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆ ಯಲ್ಲಿ ಕು. ಪ್ರಣತಿ ಜೋಗಿಬೆಟ್ಟು (90%) ಡಿಸ್ಟಿಂಕ್ಷನ್ ಪಡೆದು ತೇರ್ಗಡೆ ಹೊಂದಿದ್ದಾಳೆ.
ಇವಳು ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಜೆ ಹಾಗೂ ಶ್ರೀಮತಿ ಸಂಧ್ಯಾ ಜೆ ದಂಪತಿಗಳ ಪುತ್ರಿ. ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ. ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ನ
ಕರ್ನಾಟಕ ಕಲಾಶ್ರೀ ವಿಧುಷಿ ನಯನ ವಿ ರೈ ಹಾಗೂ ವಿಧುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಯೆ.