ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ನಿವಾಸಿ, ಅರಂತೋಡು ಇರ್ನೆ ಹುಲಿಮನೆಯ ಸುಕುಮಾರ ಗೌಡರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಹಿಂದೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಇವರು ನಿವೃತ್ತಿ ಬಳಿಕ ಅರಂತೋಡಲ್ಲಿ ನೆಲೆಸಿದ್ದರು. ಇತ್ತೀಚೆಗೆ ಚೆನ್ನಕೇಶವ ದೇವಸ್ಥಾನದ ಸಮೀಪದಲ್ಲಿ ವಾಲಸರಿ ಮಜಲಿಗೆ ಹೋಗುವಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದರು.
ಮೃತರು ಪತ್ನಿ ವಸಂತಿ, ಪುತ್ರಿಯರಾದ ಶಶಿಕಲಾ ಹಾಗೂ ಶೋಭಾರನ್ನು ಅಗಲಿದ್ದಾರೆ.