ದೇವಚಳ್ಳ : ಯೋಗಾಸನ ಸ್ಪರ್ಧೆಯಲ್ಲಿ ಕು| ದೀಕ್ಷಾ ವಿಭಾಗ ಮಟ್ಟಕ್ಕೆ ಆಯ್ಕೆ

0

ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ವತಿಯಿಂದ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದೇವಚಳ್ಳ ಶಾಲಾ ವಿದ್ಯಾರ್ಥಿನಿ ಕು |ದೀಕ್ಷಾ 7ನೇ ತರಗತಿ ದ್ವಿತೀಯ ಸ್ಥಾನ ಪಡೆದು, ಹೆಬ್ರಿಯಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಇವಳಿಗೆ, ದೈ. ಶಿ. ಶಿಕ್ಷಕಿ, ಶಾಲಾ ಶಿಕ್ಷಕವೃಂದದವರು ಸಹಕರಿಸಿರುತ್ತಾರೆ. ಇವಳು ಸಂತೋಷ್ ಮುಂಡಕಜೆಯವರ ಶಿಷ್ಯೆ. ಎಲಿಮಲೆಯ ಕೋಮಲಾಂಗಿ ಮತ್ತು ಸಿದ್ಧಲಿಂಗ ದಂಪತಿಗಳ ಪುತ್ರಿ.