ವಿದ್ಯಾರ್ಥಿಗೆ ಆರ್ಥಿಕ ಸಂಕಷ್ಟ: ಉನ್ನತ ವಿದ್ಯೆಗಾಗಿ
ಬೇಕಾಗಿದೆ ಸಹೃದಯರ ಸಹಾಯ ಹಸ್ತ
ಬಡತನವನ್ನು ಮೆಟ್ಟಿ ನಿಂತು ಓದಿದ ವಿದ್ಯಾರ್ಥಿಯೊಬ್ಬ ಎಂ.ಬಿ.ಬಿ.ಎಸ್. ಕಲಿಯ ಅವಕಾಶ ಪಡೆದಿದ್ದಾರೆ. ವೈದ್ಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾದ ಈ ವಿದ್ಯಾರ್ಥಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು ಸಹೃದಯರ ಸಹಾಯ ಹಸ್ತದ ಅವಶ್ಯಕತೆ ಇವರ ವಿದ್ಯೆಗೆ ಬೇಕಾಗಿದೆ.
ಅಜ್ಜಾವರ ಗ್ರಾಮದ ಬಯಂಬು ಕಾಲೊನಿ ನಿವಾಸಿ ರಮೇಶ್ – ಜಾನಕಿ ದಂಪತಿಗಳ ಪುತ್ರ ರಕ್ಷಿತ್ ಬಯಂಬು ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿ.
ರಮೇಶ್ ಹಾಗೂ ಜಾನಕಿ ಕೂಲಿ ಕೆಲಸ ಮಾಡಿಕೊಂಡು ಬಯಂಬು ಕಾಲೊನಿಯಲ್ಲಿ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ರಕ್ಷಿತ್ – ಕಿರಿಯ ಪುತ್ರ ರೋಶನ್.
ರಕ್ಷಿತ್ ೨೦೧೯ ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದಿದ್ದು ೫೬೩ ಅಂಕಗಳಿಸಿ ಡಿಸ್ಟಿಂಕ್ಷನ್ ಪಡೆದುದಲ್ಲದೆ, ಶಾಲೆಗೆ ಅಗ್ರಸ್ಥಾನಿಯಾಗಿದ್ದರು. ಬಳಿಕ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆಯ್ದುಕೊಂಡು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು. ಕಾಲೇಜಿಗೆ ಹೋಗುವಾಗ ರಜೆ ಸಮಯದಲ್ಲಿ ರಕ್ಷಿತ್ ಕೂಡಾ ಕೆಲಸಕ್ಕೆ ಹೋಗಿ ಹಣ ಹೊಂದಿಸಿ ಅದನ್ನು ತನ್ನ ವಿದ್ಯಾಭ್ಯಾಸಕ್ಕೆ ಹೊಂದಿಸಿಕೊಂಡರು.
ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ರಕ್ಷಿತ್‌ಗೆ ತಾನು ವೈದ್ಯನಾಗಬೇಕೆಂಬ ಆಸೆ ಹುಟ್ಟಿಕೊಂಡಿತು. ಮನೆಯವರಲ್ಲಿ ತನ್ನ ಬಯಕೆಯನ್ನು ಹೇಳಿಕೊಂಡಾಗ ವಿದ್ಯಾಭ್ಯಾಸ ಸಾಕು ಎಂಬ ಮಾತು ಕೂಡಾ ಆರಂಭದಲ್ಲಿ ಬಂದಿದ್ದರೂ ಆ ಬಳಿಕ ಮನೆಯವರು ಮಗನ ವಿದ್ಯಾ ಭ್ಯಾಸಕ್ಕಾಗಿ ಶ್ರಮ ಪಟ್ಟರು. ಕಳೆದ ಒಂದು ವರ್ಷ ಮಂಗಳೂರಿನಲ್ಲಿ ಇದ್ದು ನೀಟ್ ಪರೀಕ್ಷೆಗಾಗಿ ಕೋಚಿಂಗ್ ಪಡೆದ ರಕ್ಷಿತ್ ನೀಟ್ ಪರೀಕ್ಷೆ ಬರೆದು ತೇರ್ಗಡೆಯಾದರಲ್ಲದೆ, ವೈದ್ಯ ಶಿಕ್ಷಣಕ್ಕೆ ಸರಕಾರಿ ಕೋಟಾದಡಿ ಆಯ್ಕೆಯಾದರು. ಇದೀಗ ಚಿಕ್ಕಬಳ್ಳಾಪುರ ಸರಕಾರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿ ಸೇರಿ ಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಸಹಾಯ : ತಾನು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿದ್ದರೂ ಸರಕಾರಿ ಶುಲ್ಕ ಪಾವತಿಗೆ ರಕ್ಷಿತ್ ಕುಟುಂಬದಲ್ಲಿ ಹಣ ಇರಲಿಲ್ಲ. ಅದಕ್ಕಾಗಿ ತನ್ನ ಪರಿಚಯಸ್ಥರ ಮೂಲಕ ಸುಳ್ಯದ ಲಯನ್ಸ್ ಸದಸ್ಯ ವಿನೋದ್ ಲಸ್ರಾದೋರನ್ನು ಭೇಟಿಯಾಗಿ ಅವರು ತಮ್ಮ ಲಯನ್ಸ್ ಕ್ಲಬ್ ಸದಸ್ಯರ ಮುಂದೆ ಮನವಿ ಇಟ್ಟಾಗ ಎಲ್ಲ ಸದಸ್ಯರೂ ಸಹಾಯವನ್ನು ನೀಡಿದ್ದಾರೆ. ಇದೀಗ ಮೊದಲ ಶುಲ್ಕಕ್ಕೆ ಹಣ ಹೊಂದಾಣಿಕೆಯಾಗಿದೆ. ಆದರೂ ವೈದ್ಯ ಶಿಕ್ಷಣಕ್ಕೆ ಇನ್ನಷ್ಟು ನೆರವು ಬೇಕಾದುದರಿಂದ ಸಹೃದಯರ ಸಹಾಯ ಬೇಕಾಗಿದೆ.
ನನಗೆ ವೈದ್ಯನಾಗುವ ಆಸೆ ಸಣ್ಣವನಾಗಿರುವಾಗಲೇ ಇತ್ತು. ಅದಕ್ಕಾಗಿ ಶ್ರಮ ಪಟ್ಟಿzನೆ. ನೀಟ್ ಪರೀಕ್ಷೆ ಬರೆದು ಈಗ ವೈದ್ಯ ಸೀಟು ಸಿಕ್ಕಿದೆ. ಆದರೆ ಆರ್ಥಿಕ ಸಂಕಷ್ಟ ಇದೆ. ಈಗಾಗಲೇ ಧರ್ಮಸ್ಥಳ ಸಂಘದಿಂದ ಮಾಡಿದ ಸಾಲ ಇದೆ. ಬ್ಯಾಂಕ್ ಲೋನ್ ಮಾಡಬೇಕೆಂದಿದ್ದರೂ ಅದು ಈಗ ಆಗುವುದಿಲ್ಲ.
-ರಕ್ಷಿತ್ ಬಯಂಬು
ವೈದ್ಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾದವರು
=====
ಸಹಾಯ ಮಾಡುವವರು ರಕ್ಷಿತ್‌ನ ಖಾತೆಗೆ ಸಹಾಯ ನೀಡಬಹುದು
Account holder name : Rakshith B R
Account no : 0432500100133601
Branch: Ajjavara
IFSC:KARB0000043
&———————-
ಮಗ ಓದಲು ಹುಷಾರಿದ್ದಾನೆ. ವೈದ್ಯ ಸೀಟು ಸಿಕ್ಕಿದೆ. ಈಗಾಗಲೇ ಧರ್ಮಸ್ಥಳ ಸಂಘದಿಂದ ಸಾಲ ಮಾಡಿ ಕೊಟ್ಟಿzವೆ. ಇನ್ನೂ ಮಾಡಲು ನಮ್ಮಿಂದ ಕಷ್ಟ. ಹಾಗಾಗಿ ಮಗನ ಕಲಿಕೆಗಾಗಿ ಸಹಾಯ ಹಸ್ತ ನೀಡಿದರೆ ಪಡೆಯುತ್ತೇವೆ.
-ಶ್ರೀಮತಿ ಜಾನಕಿ