ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾಗಿ ಜನಾರ್ದನ ನೆಕ್ಕಿಲ

0

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಪ್ರಾಂಶುಪಾಲರಾಗಿ ಜನಾರ್ದನ ನೆಕ್ಕಿಲ ಕಡಬ ಜೂನಿಯರ್ ಕಾಲೇಜಿನಿಂದ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಬೆಳ್ಳಾರೆ ಪದವಿ ಪೂರ್ವ ಕಾಲೇಜಿನಲ್ಲಿ 20 ವರ್ಷ ಉಪನ್ಯಾಸಕರಾಗಿ, ಸುಳ್ಯ ಜೂನಿಯರ್ ಕಾಲೇಜಿನಲ್ಲಿ 5 ವರ್ಷ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ, ಕಡಬ ಜೂನಿಯರ್ ಕಾಲೇಜಿಗೆ ಪ್ರಾಂಶುಪಾಲರಾಗಿ ವರ್ಗಾವಣೆ ಗೊಂಡಿದ್ದರು. ಇವರು ಐವತ್ತೊಕ್ಲು ಗ್ರಾಮದ ಕಂರ್ಬು ನೆಕ್ಕಿಲದವರು.