ಸುಳ್ಯ ವಲಯ ಮಟ್ಟದ ಭಜನಾ ಪರಿಷತ್ ಸಭೆ- ವಲಯ ಸಮಿತಿ ರಚನೆ

0

ಸುಳ್ಯ ತಾಲೂಕು ಭಜನಾ ಪರಿಷತ್ತಿನ ಸುಳ್ಯ ವಲಯ ಮಟ್ಟದ ಸಭೆಯು ಸೆ.4 ರಂದು ಸುಳ್ಯ ಯೋಜನಾಧಿಕಾರಿ ಕಚೇರಿಯಲ್ಲಿ ನಡೆಯಿತು.
ತಾಲೂಕು ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ರವರು ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ವಲಯಾಧ್ಯಕ್ಷ ಬಾಲಚಂದ್ರ ಧರ್ಮಾರಣ್ಯ,‌
ಮೇಲ್ವಿಚಾರಕಿ ಪ್ರಿಯಾ ಬಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಲೆಟ್ಟಿ, ಉಬರಡ್ಕ ಮಿತ್ತೂರು ಮತ್ತು ಸುಳ್ಯದಲ್ಲಿ ಇರುವ ಭಜನಾ ಮಂಡಳಿಗಳ ವಲಯ ಮಟ್ಟದ ಸಮಿತಿಯನ್ನು ರಚಿಸಲಾಯಿತು.
ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದಲ್ಲಿ ಭಾಗವಹಿಸುವ ಮಂಡಳಿಯ ಸದಸ್ಯರ ಆಯ್ಕೆ ಬಗ್ಗೆ ಸೂಚಿಸಲಾಯಿತು.
ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ ಸ್ವಾಗತಿಸಿದರು. ವನಿತಾ ಜಯನಗರ ವಂದಿಸಿದರು.