ಯಶಸ್ವಿಯಾಗಿ ಹೆರಿಗೆ ಮಾಡಿಸಿದ ನರ್ಸಿಂಗ್ ಆಫೀಸರ್ ಹಿಮಕರ ಕಾಡುಪಂಜ
ಮಹಿಳೆಯೊಬ್ಬರನ್ನು ಹೆರಿಗೆಗೆಂದು 108 ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಆಂಬ್ಯುಲೆನ್ಸ್ ನಲ್ಲಿಯೇ ಹೆರಿಗೆಯಾದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಳಿಲದ ದಿವ್ಯ ಎಂಬ ಮಹಿಳೆಗೆ ತೀವ್ರ ಹೆರಿಗೆ ನೋವು ಇದೆ ಎಂದು ಬೆಳ್ಳಾರೆ 108 ಆಂಬುಲೆನ್ಸ್ ಗೆ ಕರೆಮಾಡಿ ತಿಳಿಸುತ್ತಾರೆ, ಕೂಡಲೇ ಕಾರ್ಯ ಪ್ರವೃತರಾದ ಆಂಬುಲೆನ್ಸ್ ಸಿಬ್ಬಂದಿ,ನರ್ಸಿಂಗ್ ಆಫೀಸರ್ ಹಿಮಕರ ಕಾಡುಪಂಜ ಮತ್ತು ಡ್ರೈವರ್ ಆನಂದ ಗೌಡ ಬಾಳಿಲಕ್ಕೆ ತೆರಳಿ, ಗರ್ಭಿಣಿಯನ್ನು ಕರೆತರುವಾಗ ಐವರ್ನಾಡು ಸಮೀಪ ತಲುಪಿದಾಗ ಮಹಿಳೆಗೆ ಹೆರಿಗೆ ನೋವು ಜಾಸ್ತಿ ಆಗಿದೆ.
ಕೂಡಲೇ ಸೇವೆಯಲ್ಲಿದ್ದ ನರ್ಸಿಂಗ್ ಆಫೀಸರ್ ಹಿಮಕರ ಕಾಡುಪಂಜರು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ,ನಂತರ ತಕ್ಷಣ ಸುಳ್ಯ ತಾಲೂಕು ಆಸ್ಪತ್ರೆಗೆ ಕರೆ ತಂದು ದಾಖಲು ಮಾಡಿದ್ದಾರೆ.
ತಾಯಿ ಮತ್ತು ಮಗು ಯಾವುದೇ ಸಮಸ್ಯೆ ಇಲ್ಲದೇ ಆರೋಗ್ಯದಿಂದಿದ್ದಾರೆ ಎಂದು ತಿಳಿದುಬಂದಿದೆ, ಆಂಬ್ಯುಲೆನ್ಸ್ ಸಿಬ್ಬಂದಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.