ಸುಳ್ಯದಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್, ವಿಕಲ ಚೇತನ ಇಲಾಖೆ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಜಂಟಿಯಾಗಿ ನ. 26 ರಂದು ನಡೆಯಿತು.

ಕ್ಯಾಂಪ್ ನಲ್ಲಿ ತಾಲೂಕು ಪಂಚಾಯತ್ ನ ಎಂ.ಆರ್.ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ಯು.ಆರ್.ಡಬ್ಲ್ಯೂ ಪ್ರವೀಣ್ ನಾಯಕ್ ಇತರ ಪಂಚಾಯತ್ ಗಳ ವಿ.ಆರ್.ಡಬ್ಲ್ಯೂರವರಾದ ಕೃಷ್ಣ ಪ್ರಸಾದ್, ಪುಷ್ಪಶ್ರೀ, ಮೀನಾಕ್ಷಿ, ಉಮ್ಮರ್, ಸದಾನಂದ, ರಂಜಿನಿ ಆಶೀಸ್, ರಂಜನ್, ಹರಿಣಿ, ಕಾವೇರಿ, ಹರ್ಷಿತ್, ವೆಂಕಟ್ರಮಣ, ಧರ್ಮಪಾಲ. ಆರೋಗ್ಯ ಇಲಾಖೆಯ ಚಂದ್ರಪ್ಪ, ದಾದಿ ನಯನ ಹಾಜರಿದ್ದರು.

ವೈದ್ಯಾಧಿಕಾರಿ ಡಾ.ಕರುಣಾಕರ್ ನೇತ್ರತ್ವದಲ್ಲಿ ಎಲ್ಲಾ ತಜ್ಞ ವೈದ್ಯರು ಸಹಕಾರ ನೀಡಿದರು. ಹಲವಾರು ಜನ ಇದರ ಪ್ರಯೋಜನ ಪಡೆದು ಕೊಂಡರು.