ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

0

ಸಂಘಟನೆಗಳಿಂದ ಪತ್ರಕರ್ತರ ಬಲವರ್ಧನೆ: ತಹಶೀಲ್ದಾರ್ ಮಂಜುಳಾ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ 2024 – 25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಡಿ.26 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.


ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಜಿಲ್ಲಾ ಗೌರವಾಧ್ಯಕ್ಷ ,ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ರವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು.


ನೂತನ ಅಧ್ಯಕ್ಷರಾದ ಜಯಶ್ರೀ ಕೊಯಿಂಗೋಡಿ,ಕಾರ್ಯದರ್ಶಿಯಾದ ಗಣೇಶ್ ಕುಕ್ಕುದಡಿ ,ಖಜಾಂಜಿಯಾದ ಕುಶಾಂತ್ ಕೊರತ್ಯಡ್ಕ ಹಾಗೂ ಸದಸ್ಯರು ಪದಗ್ರಹಣ ಸ್ವೀಕರಿಸಿದರು.


ಸುಳ್ಯ ತಹಶೀಲ್ದಾರ್ ಮಂಜುಳವರು ಉಪಸ್ಥಿತರಿದ್ದು ಸಂಘಟನೆಯ ಉದ್ದೇಶವೇ ಬಲವರ್ಧನೆಗಾಗಿ.ಆ ಮುಖಾಂತರ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ.ಹೊಸ ಸಂಘದ ಮುಖಾಂತರ ಹಲವು ಚಟುವಟಿಕೆಗಳು ನಿರಂತರ ನಡೆಯಲಿ ಎಂದು ಶುಭಹಾರೈಸಿದರು.


ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಈಶ್ವರ್ ವಾರಣಾಶಿ ಉಪಸ್ಥಿತರಿದ್ದರು. ಸುಳ್ಯ ಪೋಟೋಗ್ರಾಪರ್ ಅಸೋಸಿಯೇಷನ್ ಅಧ್ಯಕ್ಷ ಶಶಿ ಕೊಯಿಂಗೋಡಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಪೂರ್ವಾಧ್ಯಕ್ಷರುಗಳಾದ ಗಂಗಾಧರ ಮಟ್ಟಿ,ಗಂಗಾಧರ ಕಲ್ಲಪಳ್ಳಿ, ಹಸೈನಾರ್ ಜಯನಗರ ಶುಭ ಹಾರೈಸಿದರು.


ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ,ಗಣೇಶ್ ಕುಕ್ಕುದಡಿ ವಂದಿಸಿದರು.ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.