ಸುಳ್ಯ ಪ್ರೆಸ್ ಕ್ಲಬ್ ನೇತೃತ್ವದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಾಗೂ ಗಾಂಧಿ ಚಿಂತನ ವೇದಿಕೆ ಸುಳ್ಯ ಸಹಯೋಗದಲ್ಲಿ ನವ್ಯ ಸುಳ್ಯದ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ ದಿನಾಚರಣೆ ಪ್ರಯುಕ್ತ 15 ನೇ ವರ್ಷದ ಭವ್ಯ ಸುಳ್ಯ ಸಂಕಲ್ಪ ದಿನಾಚರಣೆ ಡಿ.26ರಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಡಾ.ಕುರುಂಜಿಯವರ ಪುತ್ಥಳಿಯ ಬಳಿ ನಡೆಯಿತು.
ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಡಾ.ಎನ್.ಎ. ಜ್ಞಾನೇಶ್ ಮುಖ್ಯ ಅತಿಥಿಗಳಾಗಿದ್ದರು.
ಸಮಾರಂಭದಲ್ಲಿ ಸ್ವಚ್ಚತೆ ಜಾಗೃತಿ ಮೂಡಿಸುವ ಪ್ರಭಾಕರ ನಾಯರ್ ರನ್ನು ಸನ್ಮಾನಿಸಲಾಯಿತು.
ಬಳಿಕ ಡಾ.ಕುರುಂಜಿ ಪುತ್ಥಳಿಗೆ ಹಾರಾರ್ಪಣೆಗೈದು, ಪುಷ್ಪ ನಮನ ಸಲ್ಲಿಸಲಾಯಿತು.
ನ.ಪಂ. ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯೆ ಶೀಲಾ ಕುರುಂಜಿ, ಪ್ರಮುಖರಾದ ದೊಡ್ಡಣ್ಣ ಬರೆಮೇಲು, ವೀರಪ್ಪ ಗೌಡ ಕಣ್ಕಲ್, ಆನಂದ ಖಂಡಿಗ, ದಿನೇಶ್ ಅಂಬೆಕಲ್ಲು, ಡಾ.ಕೆ.ಟಿ.ವಿಶ್ವನಾಥ, ವಿಶ್ವನಾಥ ನಾಯರ್, ಸುಳ್ಯಕೋಡಿ ಮಾಧವ ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿ ಗಣೇಶ್ ಕುಕ್ಕುದಡಿ ರಾಜು ಪಂಡಿತ್, ದುರ್ಗಾಕುಮಾರ್ ನಾಯರ್ ಕೆರೆ, ಗಂಗಾಧರ ಮಟ್ಟಿ, ಕೃಷ್ಣ ಬೆಟ್ಟ, ಶಿವಪ್ರಸಾದ್ ಕೇರ್ಪಳ, ಗಂಗಾಧರ ಕಲ್ಲಪಳ್ಳಿ,ಗಿರೀಶ್ ಅಡ್ಪಂಗಾಯ, ತೇಜೇಶ್ವರ ಕುಂದಲ್ಪಾಡಿ, ಶಿವಪ್ರಸಾದ್ ಆಲೆಟ್ಟಿ, ಶರೀಫ್ ಜಟ್ಟಿಪಳ್ಳ, ಹಸೈನಾರ್ ಜಯನಗರ, ದಯಾನಂದ ಕಲ್ನಾರ್, ಪದ್ಮನಾಭ ಅರಂಬೂರು, ಈಶ್ವರ ವಾರಣಾಸಿ, ನಳಿನಿ ವಿಶ್ವನಾಥ ನಾಯರ್, ಭಾಸ್ಕರ ನಾಯರ್, ನ್ಯಾಯವಾದಿ ಪವಾಜ್ ಮೊದಲಾದವರಿದ್ದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ಸ್ವಾಗತಿಸಿದರು. ಹರೀಶ್ ಬಂಟ್ವಾಳ್ ಪ್ರತಿಜ್ಞೆ ಬೋಧಿಸಿದರು. ಲೋಕೇಶ್ ಪೆರ್ಲಂಪಾಡಿ ವಂದಿಸಿದರು. ಕೋಶಾಧಿಕಾರಿ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.