ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ

0

ಬಿಜೆಪಿಯ 11 ಅಭ್ಯರ್ಥಿಗಳು ಗೆಲುವು,ಕಾಂಗ್ರೆಸ್ ನ ಒಬ್ಬರು ಗೆಲುವು

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಬ್ಬರು ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ 11 ಮಂದಿ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಒಬ್ಬರು ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರಾಮಕೃಷ್ಣ ಭಟ್ 515 ಮತ,ಪದ್ಮನಾಭ ಶೆಟ್ಡಿ 519 ಮತ,ನಾರಾಯಣ ಕೊಂಡೆಪ್ಪಾಡಿ 435 ಮತ,ಭಾಸ್ಜರ ಗೌಡ 434 ಮತ,ಜನಾರ್ದನ ಎ.423 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಕರುಣಾಕರ ಆಳ್ವ 419 ಮತಗಳನ್ನು ಪಡೆದು ಜಯಗಳಿಸಿದ್ದಾರೆ.


ಬಿಜೆಪಿಯ ಸಾಯಿಪ್ರಸಾದ್ ರೈ 407 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಕಾಂಗ್ರೆಸ್ ನ ಅನಿಲ್ ರೈ ಚಾವಡಿಬಾಗಿಲು 351 ಮತ, ಪ್ರಮೋದ್ ಶೆಟ್ಟಿ 361 ಮತ, ರಮೇಶ ಮಾರ್ಲ 295 ಮತ,ವಿಠಲದಾಸ್ ಎನ್.ಎಸ್.ಡಿ.415 ಮತ,ಶ್ರೀರಾಮ ಪಾಟಾಜೆ 296 ಮತ ಪಡೆದು ಪರಾಭವಗೊಂಡಿದ್ದಾರೆ.


ಹಿಂದುಳಿದ ವರ್ಗ ಎ ಯಲ್ಲಿ ಬಿಜೆಪಿ ಬೆಂಬಲಿತ ವಾಸುದೇವ ನಾಯಕ್ 416 ಮತ ಪಡೆದು ವಿಜಯಿಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಸ್ತಾಫ 258 ಮತ, ಸ್ವತಂತ್ರ ಅಭ್ಯರ್ಥಿ ಮಾಧವ ತಡಗಜೆ 178 ಮತ ಪಡೆದು ಪರಾಭವಗೊಂಡಿದ್ದಾರೆ.
ಹಿಂದುಳಿದ ವರ್ಗ ಬಿಯಲ್ಲಿ ಬಿಜೆಪಿ ಅಭ್ಯರ್ಥಿ ಐತ್ತಪ್ಪ ರೈ 461 ಮತಗಳನ್ನು ಪಡೆದು ವಿಜಯಿಯಾದರು.


ಕಾಂಗ್ರೆಸ್ ನ ಸುನಿಲ್ ರೈ ಪುಡ್ಕಜೆ 404 ಮತಗಳನ್ನು ಪಡೆದು ಪರಾಭವಗೊಂಡರು.
ಪರಿಶಿಷ್ಟ ಜಾತಿಯಲ್ಲಿ ಬಿಜೆಪಿ ಬೆಂಬಲಿತ ಬಿಯಾಳು 392 ಮತಗಳನ್ನು ಪಡೆದು ವಿಜಯಿಯಾದರು.
ಕಾಂಗ್ರೆಸ್ ನ ಮುದ್ದ ಕೆ.289 ಮತ ಪಡೆದು ಪರಾಭವಗೊಂಡರು.
ಸ್ವತಂತ್ರ ಅಭ್ಯರ್ಥಿ ರಾಮ ಪೆರುವಾಜೆ 193 ಮತ ಪಡೆದು ಪರಾಭವಗೊಂಡರು.
ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಬಿಜೆಪಿಯ ಸುಂದರ ನಾಗನಮಜಲು 470 ಮತ ಪಡೆದು ವಿಜಯಿಯಾದರು.
ಕಾಂಗ್ರೆಸ್ ನ ಚಂದ್ರಶೇಖರ ಪೆಲತ್ತಡ್ಕ 397 ಮತ ಪಡೆದು ಪರಾಭವಗೊಂಡರು.
ಮಹಿಳಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ವನಿತಾ ಸಾರಕರೆ 502 ಮತ, ಭಾರತಿ ಕೊಚ್ಚಿ 495 ಮತಗಳನ್ನು ಪಡೆದು ವಿಜಯಿಯಾದರು.
ಕಾಂಗ್ರೆಸ್ ನ ಶಾರದಾ ರೈ 310 ಮತ,ನಿರ್ಮಲ ರೈಯವರು 348 ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣೆಯು ಬೆಳಿಗ್ಗೆ ಬೆಳ್ಳಾರೆ ಕೆಪಿಎಸ್ ನಲ್ಲಿ ನಡೆದು ಸಂಜೆ ಮತ ಎಣಿಕೆ ನಡೆಯಿತು.
ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.ರವರು ಚುನಾವಣಾಧಿಕಾರಿಯಾಗಿದ್ದು ಚುನಾವಣೆ ನಡೆಸಿಕೊಟ್ಟರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಬೆಳ್ಳಾರೆ ಪೊಲೀಸರು ಭದ್ರತಾ ವ್ಯವಸ್ಥೆ ಮಾಡಿದ್ದರು.