ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಬಳಿ ಕಿತ್ತು ಹೋಗಿರುವ ಕಾಂಕ್ರಿಟ್ ರಸ್ತೆ

0

ಭಾರಿ ಗಾತ್ರದ ಹೊಂಡ ಗುಂಡಿ ನಿರ್ಮಾಣವಾಗಿ ವಾಹನ ಸವಾರರಿಗೆ ತಂದೊಡ್ಡಿರುವ ಸಂಕಷ್ಟ

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ನಿಲ್ದಾಣ ಕಾಂಕ್ರಿಟ್ ರಸ್ತೆ ಕಳೆದ ಹಲವಾರು ತಿಂಗಳುಗಳಿಂದ ಕಾಂಕ್ರಿಟ್ ರಸ್ತೆ ಕಿತ್ತು ಹೋಗಿ ಹೊಂಡ ನಿರ್ಮಾಣವಾಗಿದೆ.

ಇದರಿಂದ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ಹೊರ ಹೋಗುವ ವಾಹನಗಳು ಚಲಿಸಲು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ಖಾಸಗಿ ಬಸ್ಸು, ಮತ್ತು ವ್ಯಾನ್ ಗಳು ವಾಲಿ ಕ್ಕೊಂಡು ಬರುವ ಪರಿಸ್ಥಿತಿ ಇದೆ.ಬಸ್ಸಿನಿಂದ ಇಲ್ಲಿ ಇಳಿಯಲು ಮುಂದಾಗಿ ಎದ್ದು ನಿಲ್ಲುವ ವೃದ್ದರು ಅಥವಾ ಮಕ್ಕಳು ಬಸ್ಸು ಗಳು ಸಡನ್ ಹಾಗಿ ವಾಲಿದಾಗ ಅವರು ಬೀಳುವ ಸಂಭವವು ಕೂಡ ಉಂಟಾಗಬಹುದು.

ಆದ್ದರಿಂದ ಸಂಭಂದಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ.