ಮಂಡೆಕೋಲು ಗ್ರಾಮದ ಪೇರಾಲು ಬಜಪ್ಪಿಲ ಕ್ಷೇತ್ರದಲ್ಲಿ ಉಳ್ಳಾಕುಲು ದೈವಗಳ ನೇಮೋತ್ಸವವು ಡಿ.26ರಂದು ನಡೆಯಿತು.
ಬೆಳಗ್ಗೆ ಸಣ್ಣ ಉಳ್ಳಾಕುಲು ದೈವದ ನೇಮ ಆರಂಭವಾಗಿ ಪ್ರಸಾದ ವಿತರಣೆ ನಡೆಯಿತು. ಬೆಳಗ್ಗೆ 11.45 ಕ್ಕೆ ಉಳ್ಳಾಕುಲು ದೈವದ ಉತ್ಸವ ಆರಂಭಗೊಂಡಿತು. ಸಾವಿರಾರು ಮಂದಿ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಅನ್ನ ಪ್ರಸಾದ ಸ್ವೀಕರಿಸಿದರು.
ದೈವಸ್ಥಾನದ ಆಡಳಿತ ಮೊಕ್ತೇಸರರಾದ ಹೇಮಂತ್ ಕುಮಾರ್ ಗೌಡರಮನೆ, ಕಾರ್ಯದರ್ಶಿ ಪ್ರವೀಣ್ ಬಾಳೆಕೋಡಿ, ಕೋಶಾಧಿಕಾರಿ ಮೇದಪ್ಪ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಕೋಶಾಧಿಕಾರಿ ತೀರ್ಥೇಶ್ ಬಲಂದೋಟಿ, ಜಯರಾಮ ಗೌಡರಮನೆ, ಕೌಶಿಕ್ ಗೌಡರಮನೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಪೇರಾಲು ಹದಿನಾರು ಮನೆತನದವರು, ಊರವರು, ಪರವೂರವರು ಉಪಸ್ಥಿತರಿದ್ದರು.
ಡಿ.27ರಂದು ಬೆಳಗ್ಗೆ ಧೂಮಾವತಿ ಮತ್ತು ಪರಿವಾರ ದೈವಗಳ ಕಾಲಾವಧಿ ನೇಮೋತ್ಸವ ನಡೆಯುವುದು.