ಕೇರ್ಪಡ ಮಹಿಷಮರ್ದಿನೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ

0

ಜ.1ರಿಂದ 07ರತನಕ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ

ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಮಿತಿಯವರು

ಎಡಮಂಗಲ ಗ್ರಾಮದ ಮುರುಳ್ಯದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು 7 ದಿನಗಳ ಕಾಲ ನಡೆಯಲಿದೆ.ಜ.01ರಿಂದ 7ರ ತನಕ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾಗಮದೊಂದಿಗೆ ನೆರವೇರಲಿದೆ.ಕ್ಷೇತ್ರದ ತಂತ್ರಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿದೆ. ಸುಮಾರು ಅಂದಾಜು ರೂ. 70 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಸುಮಾರು 800 ವರ್ಷ ಇತಿಹಾಸ ಇರುವ ದೇವಸ್ಥಾನ ಇದಾಗಿದೆ. 2009ರಲ್ಲಿ ಈಗಿರುವ ನಮ್ಮ ಸಮಿತಿ ಅಸ್ಥಿತ್ವಕ್ಕೆ ಬಂದಾಗ ಮಣ್ಣಿನ ಗೋಡೆಯನ್ನು ಹೊಂದಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಚಿಂತನೆ ಮಾಡಿದೆವು. 2012ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿತ್ತು.ಇದೀಗ 12 ವರ್ಷದ ಬಳಿಕ ನಮ್ಮದೇ ವ್ಯವಸ್ಥಾಪನಾ ಸಮಿತಿಗೆ ಬ್ರಹ್ಮಕಲಶೋತ್ಸವ ಕಾರ್ಯ ನೆರವೇರಿಸಲು ಶ್ರೀ ದೇವಿಯು ಅವಕಾಶ ನೀಡಿರುವುದು ಭಾಗ್ಯ ಎಂದರು.


ಬಳಿಕ ಪವಾಡ ಎಂಬಂತೆ ಬಹಳ ವಿಜೃಂಭಣೆಯಿಂದ 2012ರಲ್ಲಿ ಸುಮಾರು ರೂ.2 ಕೋಟಿ ವೆಚ್ಚದಲ್ಲಿ ಶ್ರೀ ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ನೆರವೇರಿತ್ತು. ಆ ನಂತರ ಈ ಭಾಗದ ಸರ್ವರೂ ಮತ್ತು ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ದುಡಿದ ಪ್ರತಿಯೊಬ್ಬರೂ, ಹಾಗೂ ಭಕ್ತರು ಜೀವನದಲ್ಲಿ ಅಭಿವೃದ್ದಿ ಕಂಡಿದ್ದಾರೆ ಅನ್ನುವುದು ಸತ್ಯ.ಬಳಿಕ ಶ್ರೀ ದೇವಿಯ ಮಹಾತ್ಮೆ ಎಂಬಂತೆ ಪರಿಸರದ ಸರ್ವರಿಗೂ ಶ್ರೀ ದೇವಿಯ ಭಕ್ತರಿಗೂ ಒಳಿತಾಗಿದೆ.ಅಲ್ಲದೆ ಪ್ರತಿಯೊಬ್ಬರು ಅಭಿವೃದ್ದಿ ಕಂಡಿದ್ದಾರೆ.ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಹಗಲಿರುಳೆನ್ನದೆ ದುಡಿದ ಪ್ರತಿಯೊಬ್ಬರು ಜೀವನದಲ್ಲಿ ಉನ್ನತ ಸ್ಥಾನ ಸಂಪಾದಿಸಿದ್ದಾರೆ.ಕ್ಷೇತ್ರಕ್ಕೆ ಬಂದು ತಮ್ಮ ಅಭೀಷ್ಠೆ ಈಡೇರಿಸಲು ಪ್ರಾರ್ಥನೆ ಮಾಡಿದವರಿಗೆ ಶ್ರೀ ದೇವಿ ವರ ನೀಡಿದ್ದಾಳೆ ಅನ್ನುವುದು ಸತ್ಯ ಎಂದರು. ವಿವಾಹ, ಕಂಕಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ಇತರ ಅಭಿಷ್ಠೆಗಳು ಈಡೇರಿದ ಅನೇಕ ಉದಾಹರಣೆಗಳು ಇಲ್ಲಿದೆ. ಎಂದು ವಸಂತ ನಡುಬೈಲು ಹೇಳಿದರು.

  • ಸುಮಾರು 60 ಲಕ್ಷ ವೆಚ್ಚದಲ್ಲಿ ಕಾರ್ಯ
    ಜೀರ್ಣೋದ್ಧಾರ, ಅಭಿವೃದ್ಧಿ ಕೆಲಸ ಮತ್ತು ಬ್ರಹ್ಮಕಲಶೋತ್ಸವ ಒಟ್ಟಾಗಿ 70 ಲಕ್ಷ ವೆಚ್ಚದಲ್ಲಿ ನೆರವೇರಲಿದೆ.ರೂ.30 ಲಕ್ಷ ವೆಚ್ಚದಲ್ಲಿ ಪವಿತ್ರ ಪುಷ್ಕರಣಿ, ತೀರ್ಥ ಭಾವಿ ನಿರ್ಮಾಣಗೊಂಡು ಜ.3ರಂದು ಲೋಕಾರ್ಪಣೆಗೊಳ್ಳಲಿದೆ.ಇದರೊಂದಿಗೆ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ ಮತ್ತು ತೀರ್ಥಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಕೆಯಾಗಲಿದೆ.ಸುಮಾರು 10 ಲಕ್ಷ ವೆಚ್ಚದಲ್ಲಿ ಭೋಜನ ಶಾಲೆ ನಿರ್ಮಿತವಾಗಲಿದೆ.ಅಲ್ಲದೆ 5 ಲಕ್ಷ ವೆಚ್ಚದಲ್ಲಿ ಶೌಚಾಲಯ ಪುನರ್‌ನಿರ್ಮಾಣವಾಗಲಿದೆ.ಒಟ್ಟಾಗಿ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಕಾರ್ಯಗಳು ಸುಮಾರು ಅಂದಾಜು 70 ಲಕ್ಷ ವೆಚ್ಚದಲ್ಲಿ ನೆರವೇರಲಿದೆ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ವೆಂಕಪ್ಪ ಗೌಡ ಆಲಾಜೆ ತಿಳಿಸಿದರು.
    ಭಕ್ತರಿಗೆ ವರ ನೀಡುವ ಮಾತೆ: ಶಾಸಕಿ ಭಾಗೀರಥಿ ಮುರುಳ್ಯ
    12 ವರ್ಷದ ಹಿಂದೆ ಶ್ರೀ ದೇವಳ ಜೀರ್ಣೋದ್ದಾರಗೊಂಡ ಬಳಿಕ ಸಮಸ್ತ ಭಕ್ತರಿಗೆ ಆರೋಗ್ಯ, ಸಂಪತ್ತು, ಸುಖ ಶಾಂತಿಯನ್ನು ಶ್ರೀ ದೇವಿ ಒದಗಿಸಿದ್ದಾಳೆ. ಈ ಹಿಂದೆ ನಡೆದ ಬ್ರಹ್ಮಕಲಶೋತ್ಸವದಲ್ಲಿ ದುಡಿದು ಬದುಕಿನಲ್ಲಿ ಉನ್ನತಿ ದೊರಕುತ್ತದೆ ಎನ್ನುವುದಕ್ಕೆ ನಾನು ಕೂಡಾ ನಿದರ್ಶನಳಾಗಿದ್ದೇನೆ. 12 ವರ್ಷದ ನಂತರ ಮತ್ತೊಮ್ಮೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ. ಶ್ರೀ ದೇವರ ಈ ಬಳಿಕ ಶ್ರೀ ದೇವಿಯ ಮಹಿಮೆ ಮತ್ತಷ್ಟು ಹೆಚ್ಚಾಗಿ ನಮ್ಮನ್ನು ಹರಸುತ್ತಾಳೆ ಅನ್ನುವ ನಂಬಿಕೆ ನಮ್ಮದು.ಪವಿತ್ರ ಪುಷ್ಕರಿಣಿ, ತಾಮ್ರದ ಹೊದಿಕೆ, ಭೋಜನ ಶಾಲೆ, ಅಶ್ವತ್ಥ ಕಟ್ಟೆ ಅಭಿವೃದ್ಧಿಯಾಗಲಿದೆ. ಶೌಚಾಲಯ ಅಭಿವೃದ್ದಿಯೂ ನೆರವೇರಲಿದೆ. ಸರ್ವ ಭಕ್ತರು ಶ್ರೀ ದೇವಳದಲ್ಲಿ ಕಳೆದ ಹಲವಾರು ದಿನಗಳಿಂದ ಹಗಲಿರುಳೆನ್ನದೆ ಧಣಿವರಿಯದೆ ದುಡಿಯುತ್ತಿದ್ದಾರೆ.ಅವರಿಗೆ ಶ್ರೀ ದೇವಿಯ ಆಶೀರ್ವಾದ ಸದಾ ಇರಲಿ ಅನ್ನುವುದು ನಮ್ಮ ಪ್ರಾರ್ಥನೆ. ವಿಜೃಂಭಣೆಯಿAದ ವೈದಿಕ ವಿದಿವಿಧಾನ ಮತ್ತು ಧಾರ್ಮಿಕ ಸಮ್ಮಿಲನದಿಂದ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಸರ್ವ ಭಕ್ತರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶಾಸಕಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಭಾಗೀರಥಿ ಮುರುಳ್ಯ ಹೇಳಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರೂಪರಾಜ ರೈ, ನಾಗೇಶ್ ಆಳ್ವ ಕಟ್ಟಬೀಡು,ಯೋಗಾನಂದ ಉಳ್ಳಾಲಾಡಿ, ರಘುನಾಥ ಎಂಜೀರು, ವಾರಿಜಾಕ್ಷಿ ಕೇರ್ಪಡ, ಶ್ರೀಮತಿ ಗುಣವತಿ ನಾವೂರು, ಪ್ರಮುಖರಾದ ಜಯಪ್ರಕಾಶ್ ಲೆಕ್ಕೆಸಿರಿಮಜಲು, ಧರ್ಮಪಾಲ ಅನಾವು, ನವೀನ್ ಕರೆಂಬಿಲ, ಸಚಿನ್ ಆರೆಂಬಿ, ಕಾರ್ತಿಕ್ ಕಲ್ಲೇರಿ, ದೀಪಕ್ ರೈ, ರಾಮಚಂದ್ರ ಪೂಜಾರಿ ನೂಜಾಡಿ, ಧೀರೇಶ್ ನಡುಬೈಲು, ಪುಷ್ಪಾವತಿ ಕರಿಂಬಿಲ, ತಾರನಾಥ ಕರಿಂಬಿಲ ಉಪಸ್ಥಿತರಿದ್ದರು.