ಡಾ.ರೇಣುಕಾಪ್ರಸಾದ್ ಕೆ.ವಿ.ಯವರಿಗೆ ದಿನೇಶ್ ಮಡ್ತಿಲರವರ ಮನೆಯಲ್ಲಿ ಸನ್ಮಾನ

0

ಪ್ರತಿಷ್ಟಿತ ರಾಜ್ಯ ಒಕ್ಕಲಿಗ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಎರಡನೇ ಬಾರಿ ಬಹುಮತದಿಂದ ಆಯ್ಕೆಯಾದ ಡಾ.ರೇಣುಕಾಪ್ರಸಾದ್ ಕೆ.ವಿಯವರನ್ನು ದಿನೇಶ್ ಮಡ್ತಿಲರವರ ಅನುಗ್ರಹ ಮನೆಯಲ್ಲಿ ಸನ್ಮಾನಿಸಲಾಯಿತು.


ಡಿ.23 ರಂದು ವಿವೇಕ್ ರಾಜ್ ಎಂ.ಡಿ ಮತ್ತು ಸುಖಿತಾ ಡಿ.ಜೆ.ದಂಪತಿಗಳ ವಿವಾಹದ ಔತಣಕೂಟ ಸಮಾರಂಭದಲ್ಲಿ ಡಾ.ರೇಣುಕಾಪ್ರಸಾದ್ ಕೆ.ವಿ.ಮತ್ತು ಶ್ರೀಮತಿ ಜ್ಯೋತಿ ರೇಣುಕಾಪ್ರಸಾದ್ ವರನ್ನು ಶಾಲು ಹೊದಿಸಿ ,ಫಲ,ಪುಷ್ಪ ಸ್ಮರಣಿಕೆ ನೀಡಿ ಮಡ್ತಿಲ ಮನೆಯ ಪರವಾಗಿ ಶ್ರೀಮತಿ ಶಿವಮ್ಮ ಪುರುಷೋತ್ತಮ ಮಡ್ತಿಲರವರು ಊರವರು ಮತ್ತು ಬಂಧುಗಳ ಸಮ್ಮುಖದಲ್ಲಿ ಸನ್ಮಾನಿಸಿದರು.


ಈ ಸಂರ್ಭದಲ್ಲಿ ಮೌರ್ಯ ಆರ್.ಕುರುಂಜಿ, ದಿನೇಶ್ ಮಡ್ತಿಲ ಮತ್ತು ಶ್ರೀಮತಿ ಗುಣರತ್ನ ದಿನೇಶ್ ಮಡ್ತಿಲ, ಶರತ್ ಮಡ್ತಿಲ ಮತ್ತು ಶ್ರೀಮತಿ ಅನಿತ ಶರತ್ ಮಡ್ತಿಲ ಮತ್ತು ಮಕ್ಕಳು,ಶಶಿಕಲಾ ರಾಧಾಕೃಷ್ಣ ಮತ್ತು ಮಕ್ಕಳು,ಕಿರಣ್ ರಾಜ್ ಎಂ.ಡಿ.ಮಡ್ತಿಲ ಹಾಗೂ ಮನೆಯವರು ,ಕುಟುಂಬಸ್ಥರು ಉಪಸ್ಥಿತರಿದ್ದರು.