ನೊಂದವರ,ಬಡವರ ಹಾಗೂ ಶೈಕ್ಷಣಿಕ ಸಂಸ್ಥೆಗಳ ಆಶಾ ಕೇಂದ್ರ ದೃಷ್ಟಿ ಸಂಸ್ಥೆ : ಶಶಿಕಲಾ ನೀರಬಿದಿರೆ
ಜಯನಗರ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ 2025 ರ ನೂತನ ವರ್ಷದ ಕ್ಯಾಲಂಡರ್ ಬಿಡುಗಡೆ ಕಾರ್ಯಕ್ರಮ ಜಯನಗರ ದೃಷ್ಟಿ ಚಾರಿಟೇಬಲ್ ಬಸ್ಸು ತಂಗುದಾಣ ಬಳಿ ಡಿ 26 ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕ್ಯಾಲಂಡರ್ ಬಿಡುಗಡೆ ಮಾಡಿ ಮಾತನಾಡಿದ ಸುಳ್ಯ ನಗರ ಪಂಚಾಯತ್ ಅದ್ಯಕ್ಷೆ ಶಶಿಕಲಾ ನೀರಬಿದಿರೆ ‘ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸುಳ್ಯ ಭಾಗದಲ್ಲಿ ಸಾಮಾಜಿಕ,ಆರೋಗ್ಯ, ಶೈಕ್ಷಣಿಕ ವಿಷಯಗಳಲ್ಲಿ ಸಹಾಯ ಹಸ್ತವನ್ನು ನೀಡುತ್ತಾ ಉತ್ತಮ ಕಾರ್ಯಕ್ರಮವನ್ನು ಮಾಡಿಕ್ಕೊಂಡು ಬಂದಿದೆ. ಈ ಸಂಸ್ಥೆಯು ಸಮಾಜದಲ್ಲಿ ಬಡವರ, ನೊಂದವರ, ಹಾಗೂ ಶೈಕ್ಷಣಿಕ ಕೇಂದ್ರಗಳಿಗೆ ಆಶಾ ದೀಪವಾಗಿ ಬೆಳೆದಿದೆ.ಇದರ ಅಧ್ಯಕ್ಷರಾದ ಹಿರಿಯರಾದ ಬಾಲಕೃಷ್ಣ ಭಟ್ ಕೊಡಂಕೇರಿ ರವರ ಶ್ರಮ ಶ್ಲಾಘನೀಯ ಎಂದು ಕಾರ್ಯಕ್ರಮಕ್ಕೆ ಶುಭಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಭಟ್ ಕೊಡಂಕೇರಿ ವಹಿಸಿದ್ದರು.
ವೇದಿಕೆಯಲ್ಲಿ ಸ್ಥಳೀಯ ನ. ಪಂ ಸದಸ್ಯೆ ಶಿಲ್ಪಾ ಸುದೇವ್, ಸ್ಥಳೀಯರಾದ ಮಹಾಲಕ್ಷ್ಮಿ ಕೊರಂಬಡ್ಕ, ರಾಕೇಶ್ ಕುಂಟಿಕ್ಕಾನ, ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿ,ಜಯನಗರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದಪ್ಪ, ಶಾಲಾ ಮುಖ್ಯ ಶಿಕ್ಷಕಿ ವೀಣಾ, ಪತ್ರಕರ್ತರಾದ ಗಂಗಾಧರ ಕಲ್ಲಾಪಳ್ಳಿ, ದಯಾನಂದ ಕಲ್ನಾರ್,ಪದ್ಮನಾಭ ಅರಂಬೂರು, ಸಾಹಿತಿ ಭೀಮರಾವ್ ವಾಷ್ಠರ್, ಸುರೇಶ್ ಕಾಮತ್, ನವೀನ್ ಮಚಾದೋ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಟ್ರಸ್ಟ್ ನ ಮುಖ್ಯಸ್ಥ ಸಂತೋಷ್ ಕೊಡಂಕೇರಿ ವಂದಿಸಿದರು.