ಸ ಕಿ ಪ್ರಾ ಶಾಲೆ ಕರಂಬಿಲದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಪೋಷಕರಿಗೆ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಊರಿನವರಿಗೆ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಾಯಂಕಾಲ 5.30 ರಿಂದ ಸಭಾ ಕಾರ್ಯಕ್ರಮವು SDMC ಅಧ್ಯಕ್ಷರಾದ ವಸಂತ ಕೆ ಯವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಪರಮೇಶ್ವರ ಮನೋಳಿತಾಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಡಮಂಗಲ ಗ್ರಾಮ ಪಂಚಾಯತ್ ನ ಅಧ್ಯಕ್ಷ ರಾಮಣ್ಣ ಜಾಲ್ತಾರ್, ಎಡಮಂಗಲ ಗ್ರಾಮ ಪಂಚಾಯತ್ ನ ಸದಸ್ಯೆ ಶ್ರೀಮತಿ ರೇವತಿ ಎಂಜೀರು, ಸ. ಪ್ರೌ ಶಾಲೆ ಎಡಮಂಗಲ ದ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದರ್, ಎಣ್ಮೂರು ಮತ್ತು ಪಂಜ ಕ್ಲಸ್ಟರ್ ನ ಸಿ. ಆರ್. ಪಿಗಳಾದ ಜಯಂತ್ ಕಳತ್ತಜೆ , ತರ್ಬಿಯತುಲ್ ಇಸ್ಲಾಂ ಮದರಸ ಕರಂಬಿಲದ ಅಧ್ಯಕ್ಷರಾದ ಅಬ್ದುಲ್ ಕುಂಞ ಕಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ ಲೆಕ್ಕೆಸಿರಿ ಮಜಲು, ಹಿರಿಯ ವಿದ್ಯಾರ್ಥಿ ಸಂಘದ ಗೌರವಧ್ಯಕ್ಷರಾದ ಸುಧೀರ ಕುಮಾರ ಶೆಟ್ಟಿ ಕುಕ್ಕಯಕೋಡಿ , ದತ್ತಿನಿಧಿ ದಾನಿಗಳಾದ ಬಾಲಕೃಷ್ಣ. ಕೆ ಹೇಮಳ ನಿವೃತ್ತ ಮುಖ್ಯ ಗುರುಗಳು, ಯಜ್ಞೇಶ್ ಕೇರ್ಪಡ ಮಾಲಕರು ವಾಣಿ ಕಾಂಪ್ಲೆಕ್ಸ್ , ಎಸ್. ಡಿ. ಎಂ .ಸಿ ಉಪಾಧ್ಯಕ್ಷೆ ಶ್ರೀಮತಿ ನಳಿನಿ ಲೆಕ್ಕೆಸಿರಿ ಮಜಲು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭುವನ ಬಿ ಆರ್ ಹಾಗೂ ಶಾಲಾ ವಿದ್ಯಾರ್ಥಿ ನಾಯಕಿ ಮೌಲ್ಯ ಉಪಸ್ಥಿತ ರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದಾನಿಗಳಿಂದ ದತ್ತಿನಿಧಿ ವಿತರಿಸಲಾಯಿತು. ದೇವಿಪ್ರಸಾದ್ ಕೇರ್ಪಡ ರವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಗೆ ಕೊಡುಗೆ ನೀಡಿದ ಶ್ರೀ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಗುತ್ತು, ವರುಣ್ ಕುಮಾರ್ ಕರಂಬಿಲ, ಈಲಿಯಸ್ ಕರಂಬಿಲ ಹಾಗೂ ಮಹ್ಮದ್ ಅಬ್ಬಾಸ್ ರವರನ್ನು ಶಾಲಾ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕಿ ಶ್ರೀಮತಿ ಭವ್ಯ ಬಿ ಯವರು ಸರ್ವರನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಭುವನ ಬಿ.ಆರ್ ರವರು ಧನ್ಯವಾದಿಸಿದರು. ಶ್ರೀ ಪ್ರದೀಪ್ ಗುತ್ತು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಗಾಯತ್ರಿ ಯವರು ಸಹಕರಿಸಿದರು. ತದ ನಂತರ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.