ಮಂಡೆಕೋಲಿನಲ್ಲಿ ಗ್ಯಾರಂಟಿ ಅರ್ಜಿ ವಿಲೇವಾರಿ ಶಿಬಿರ

0

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಯೋಜನೆ ತಲುಪಲು ಗ್ರಾಮದಲ್ಲಿ ಶಿಬಿರ : ಶಾಹುಲ್ ಹಮೀದ್ ಕುತ್ತಮೊಟ್ಟೆ

ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸರಕಾರದ ಯೋಜನೆಗಳು ತಲುಪಬೇಕೆಂಬ ಉದ್ದೇಶದಿಂದ ಗ್ರಾಮ ಗ್ರಾಮದಲ್ಲಿ ಗ್ಯಾರಂಟಿ ವಿಲೇವಾರಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಹೇಳಿದರು.

ಡಿ.26ರಂದು ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ಗ್ಯಾರಂಟಿ ವಿಲೇವಾರಿ ಶಿಬಿರಲ್ಲಿ ಭಾಗವಹಿಸಿದ ಅವರು ಮಾತನಾಡಿದರು.

ಸರಕಾರ ಪಂಚ ಗ್ಯಾರಂಟಿ ಯೋಜನೆ ನೀಡಿದೆ. ಇದು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಮಿತಿಯನ್ನು ಸರಕಾರ ಮಾಡಿದೆ. ತಾಲೂಕಿನ ಸಮಿತಿಯು ಗ್ರಾಮ ಗ್ರಾಮದಲ್ಲಿ ಜನರ ಬಳಿಗೆ ಹೋಗಿ ಸರಕಾರದ ಸವಲತ್ತು ದೊರೆಯುವಂತೆ ಮಾಡಲು ಈ ಶಿಬಿರ.‌ ಯೋಜನೆ ಪಡೆಯಲು ಅರ್ಹರಾಗಿರುವವರು ಇದರಿಂದ ವಂಚನೆಯಾಗಬಾರದು ಎಂದು ಅವರು ಹೇಳಿದರು.

ಗ್ರಾ.ಪಂ.‌ಅಧ್ಯಕ್ಷ ಕುಶಲ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಇ.ಒ. ರಾಜಣ್ಣ‌ ಮಾಹಿತಿ ನೀಡಿದರು.

ಸಿ.ಡಿ.ಪಿ.ಒ.‌ಶೈಲಜಾ, ಜಿಲ್ಲಾ‌ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್, ತಾಲೂಕು ಸಮಿತಿ ಸದಸ್ಯರಾದ ಅಬ್ಬಾಸ್, ಲತೀಫ್ ಅಡ್ಕಾರು, ಮಂಡೆಕೋಲು ಉಸ್ತುವಾರಿ ಶೇಖರ ಮಣಿಯಾಣಿ ಕಣೆಮರಡ್ಕ, ಪಿಡಿಒ ರಮೇಶ್ ಮೊದಲಾದವರಿದ್ದರು.

ಇಬ್ಬರ ಖಾತೆಗೆ ಹಣ ಜಮೆ :
ಗೃಹಲಕ್ಷ್ಮಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೂ ಹಣ ಬಂದಿಲ್ಲವೆಂದು ಶಿಬಿರದಲ್ಲಿ ಲೀಲಾವತಿ ಹಾಗೂ ಲಲಿತ ಎಂಬವರು ಶಿಬಿರದಲ್ಲಿ ದೂರಿಕೊಂಡರು.‌ ಸ್ಥಳದಲ್ಲಿದ್ದ ಅಧಿಕಾರಿಗಖು ಸ್ಟೇಟಸ್ ಚೆಕ್ ಮಾಡಿದಾಗ ಅದರಲ್ಲಿ ಹಣ ಸಂದಾಯವಾಗಿರುವುದು ಕಂಡು ಬಂತು. ಬ್ಯಾಂಕ್ ಗೆ ಹೋಗಿ ಚಕ್ ಮಾಡದೇ ಒರುವುದರಿಂದ ಹಣ ಬಂದುದು ಫಲಾನುಭವಿಗಳಿಗೆ ಗೊತ್ತಾಗಿರಲಿಲ್ಲ. ಹೀಗೆ ಹಲವು ಮಂದಿ ಶಿಬಿರಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.