ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಕುಕ್ಕನ್ನೂರು ಉಳ್ಳಾಕುಲ ಮೂಲ ಸ್ಥಾನ : ಜೀರ್ಣೋದ್ಧಾರಕ್ಕೆ ಮುಹೂರ್ತದ ಮರ ಕಡಿಯುವ ಕಾರ್ಯಕ್ರಮ

0
ದ. 25 ರಂದು  ಕುಕ್ಕನ್ನೂರು ಉಳ್ಳಾಕುಲ ಮೂಲ ಸ್ಥಾನ (ಕುದುರೆ ಕುಂಞನ ಕೊಟ್ಟಿಗೆ) ಇದರ ಜೀರ್ಣೊದ್ಧಾರಕ್ಕೆ ಸಂಬಂಧಿಸಿದ ಮುಹೂರ್ತದ ಮರವನ್ನು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಕೃಷ್ಣ ಗೌಡ. ಎನ್. ಎಸ್. ನಡುಬೆಟ್ಟುರವರು ಉಳ್ಳಾಕುಲ ಚಾವಡಿಯಲ್ಲಿ ಪ್ರಾರ್ಥಿಸುವುದರ ಮೂಲಕ ವಿಧಿವತ್ತಾಗಿ ಮುಹೂರ್ತದ ಮರವನ್ನು ಕಡಿಯಲಾಯಿತು. 

ಈ ಸಂದರ್ಭದಲ್ಲಿ ಸೋಣಂಗೇರಿ ಹತ್ತೊಕ್ಲು ಮತ್ತು ಕುಕ್ಕನ್ನೂರು ಹದಿನಾರು ಒಕ್ಲುವಿನ ಭಕ್ತಾಭಿಮಾನಿಗಳು ಸೇರಿದ್ದರು.