ಗುತ್ತಿಗಾರು ಪಿ.ಯಂ.ಶ್ರೀ. ಹಿ.ಪ್ರಾ.ಶಾಲೆಯಲ್ಲಿ ಕ್ರೀಡಾಕೂಟ

0

ಶಾಲಾ ಶಿಕ್ಷಣ ಇಲಾಖೆ ಪಿಎಮ್ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆ ಗುತ್ತಿಗಾರು, ಶಾಲಾ ಅಭಿವೃದ್ಧಿ ಮತ್ತು ಮೆಲುಉಸ್ತುವಾರಿ ಸಮಿತಿ. ಹಿರಿಯ ವಿದ್ಯಾರ್ಥಿ ಸಂಘ ಮತ್ತು ಅಂಗನವಾಡಿ ಕೇಂದ್ರ ಗುತ್ತಿಗಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕ್ರೀಡೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಡಿ . 26ರಂದು ಕ್ರೀಡೋತ್ಸವ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕ್ರೀಡಾ ಜ್ಯೋತಿಯನ್ನು ವಿದ್ಯಾರ್ಥಿಗಳು ಶ್ರೀ ಕೃಷ್ಣ ಭಜನಾ ಮಂದಿರ ಗುತ್ತಿಗಾರು ಇಲ್ಲಿಂದ ಕ್ರೀಡಾಂಗಣಕ್ಕೆ ತಂದರು. ಸಭಾ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ವಹಿಸಿದರು.

ಧ್ವಜಾರೋಹಣವನ್ನು ಗುತ್ತಿಗಾರು ಪಿಎಸಿಎಸ್ ಬ್ಯಾಂಕಿನ ನಿರ್ದೇಶಕ ಬಿ.ಕೆ . ಬೆಳ್ಳಯಪ್ಪ ಗೌಡ ನೆರವೇರಿಸಿ ಶುಭ ಹಾರೈಸಿದರು. ಕ್ರೀಡಾಕೂಟವನ್ನು ಸುಬ್ರಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಕಾರ್ತಿಕ್ ಉದ್ಘಾಟಿಸಿ ಕ್ರೀಡೆಯು ದೈಹಿಕ ಹಾಗೂ ಮಾನಸಿಕವಾಗಿ ವ್ಯಕ್ತಿಯನ್ನ ಸದೃಢಗೊಳಿಸಲು ಹಾಗೂ ಆರೋಗ್ಯಯುಕ್ತವಾಗಿರಿಸಲು ಸಹಕಾರಿ ಯಾಗಿದೆ ಎಂಬ ಅಭಿಪ್ರಾಯ ಪಟ್ಟರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ,. ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬಾತಾಜೆ, ಗುತ್ತಿಗಾರು ಗ್ರಾ. ಪಂ. ಅಧ್ಯಕ್ಷೆ ಸುಮಿತ್ರಾ ಮೂಕಮಲೆ,. ಮಾಜಿ ತಾ. ಪಂ. ಸದಸ್ಯ ಅಶೋಕ್ ನೆಕ್ರಾಜೆ, ಗ್ರಾ. ಪಂ. ಸದಸ್ಯರಾದ ಮಾಯಿಲಪ್ಪ ಗೌಡ ಕೊಂಬೆಟ್ಟು. ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಪ್ರಸನ.ಅಮೆ ಸೇರಿದಂತೆ ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮೀತಿಯ ಸದಸ್ಯರುಗಳು. ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪೂರ್ಣಿಮ ತುಂಬಾತಾಜೆ ಸ್ವಾಗತಿಸಿದರು ಶಿಕ್ಷಕಿ ಶ್ರೀಮತಿಸವಿತಾ ಕುಮಾರಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಜೀವಿತ. ಕಾರ್ಯಕ್ರಮ ನಿರೂಪಿಸಿದರು ನಂತರ ಮಕ್ಕಳಿಗೆ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ವರದಿ.ಡಿ.ಎಚ್