ಜ.03,4,5 : ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮ
ನವೀಕೃತ ಶಾಲಾ ಕ್ರೀಡಾಂಗಣ,ಶಾಲಾ ನೂತನ ಕೊಠಡಿಗಳ ಉದ್ಘಾಟನೆ , ಸಾಧಕರಿಗೆ ಸನ್ಮಾನ
ಪತ್ರಿಕಾಗೋಷ್ಡಿಯಲ್ಲಿ ಮಾಹಿತಿ ನೀಡಿದ ಸಮಿತಿಯ ಸಂಚಾಲಕರು,ಅಧ್ಯಕ್ಷರು, ಪದಾಧಿಕಾರಿಗಳು
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮವು ಜ.03,4 ಮತ್ತು 5 ರಂದು ಅದ್ದೂರಿಯಾಗಿ ನಡೆಯಲಿದೆ.
ಪ್ರಾಥಮಿಕ ಶಾಲಾ ವಿಭಾಗದ ಶತಮಾನೋತ್ತರ’ , ಪ್ರೌಢಶಾಲಾ ವಿಭಾಗದ ‘ಅಮೃತ’ ಪದವಿಪೂರ್ವ ಕಾಲೇಜಿನ ‘ಸ್ವರ್ಣ ಸಂಭ್ರಮ’ ಕಾರ್ಯಕ್ರಮ ಒಟ್ಟಾಗಿ ವಸಂತ ಸಂಭ್ರಮ ಸಂಭ್ರಮಿಸಲಿದೆ.
ಮೂರು ದಿನವೂ ಬೆಳಿಗ್ಗೆಯಿಂದ ರಾತ್ರಿವರೆಗೆ ನಿರಂತರ ಕಾರ್ಯಕ್ರಮಗಳ ನಡೆಯಲಿದೆ ಎಂದು ವಸಂತ ಸಂಭ್ರಮ ಸಮಿತಿಯ ಸಂಚಾಲಕ ಎಸ್.ಎನ್ ಮನ್ಮಥ ಮತ್ತು ಅಧ್ಯಕ್ಷೆ ಶ್ರೀಮತಿ ರಾಜೀವಿ ರೈ ಯವರು ಹೇಳಿದರು.
ಅವರು ಡಿ.28 ರಂದು ಬೆಳ್ಳಾರೆ ಕೆ.ಪಿ.ಎಸ್.ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ವಸಂತ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆಯವರು ಮಾತನಾಡಿ ವಸಂತ ಸಂಭ್ರಮವು ಅತ್ಯಂತ ವೈಭವದಿಂದ ನಡೆಯಲಿದ್ದು ವಿವಿಧ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ.
ಎಲ್ಲಾ ಸಮಿತಿಯವರು ಸಹಕರಿಸುತ್ತಿದ್ದಾರೆ.
ಸಂಸ್ಥೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ.
ಜ.03 ರಂದು ಬೆಳಿಗ್ಗೆ ಬೆಳ್ಳಾರೆ ಮೇಲಿನ ಪೇಟೆಯಿಂದ ಶೈಕ್ಷಣಿಕ ದಿಬ್ಬಣ ಬೆಳ್ಳಾರೆ ಮುಖ್ಯ ಪೇಟೆಯಲ್ಲಿ ನಡೆಯಲಿದೆ.ಬಳಿಕ ಧ್ವಜಾರೋಹಣ ನಡೆಯಲಿರುವುದು.ಬಳಿಕ ಪದವಿ ಪೂರ್ವ ವಿಭಾಗದ ಕೊಠಡಿಗಳು,ಒಸಾಟ್ ಪ್ರಯೋಜಕತ್ವದ ಎಂಟು ಕೊಠಡಿಗಳು,ನವೀಕೃತ ಕ್ರೀಡಾಂಗಣ,ಪ್ರಾಥಮಿಕ ವಿಭಾಗದ ಮೂರು ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಬಳಿಕ ವಸಂತ ಸಂಭ್ರಮದ ಉದ್ಘಾಟನೆ ನಡೆಯಲಿದೆ.
ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಉದ್ಘಾಟಿಸಲಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಸಭಾಧ್ಯಕ್ಷತೆ ವಹಿಸಲಿದ್ದಾರೆ.ವೇದಿಕೆಯಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿರಲಿರುವರು.
ಸಭಾ ಕಾರ್ಯಕ್ರಮ ನಡೆದ ಬಳಿಕ ಸಾಂಸ್ಕೃತಿ ಮತ್ತು ಕಲಾ ಕಾರ್ಯಕ್ರಮಗಳು ನಡೆಯಲಿದೆ.
ಜ.4 ರಂದು ಬೆಳಿಗ್ಗೆ ಕೆಪಿಎಸ್ ವಿದ್ಯಾರ್ಥಿಗಳಿಂದ ‘ಸಾಂಸ್ಕೃತಿಕ ವೈವಿದ್ಯ ‘ನಡೆಯಲಿದೆ.
ಅಪರಾಹ್ನ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ ವಿ.ಜೆ.ವಿಖ್ಯಾತ್ ಬಳಗದವರಿಂದ ಸಾಂಸ್ಕೃತಿಕ ರಸ ಸಂಜೆ ನಡೆಯಲಿದೆ.
ಜ.05 ರಂದು ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಬಳಿಕ ವಸಂತ ಸಂಭ್ರಮ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ವಸಂತ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ವಿಶೇಷ ಆಹ್ವಾನಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ,ಮಾಜಿ ಸಚಿವ ಎಸ್.ಅಂಗಾರ ಸೇರಿದಂತೆ ಹಲವು ಜನ ಗಣ್ಯರು ಉಪಸ್ಥಿತರಿರುವರು.
ಬಳಿಕ ಹಳೆ ವಿದ್ಯಾರ್ಥಿ ಸಂಗಮ ನಡೆಯಲಿದೆ .
ನಂತರ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯವರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ಕೆಪಿಎಸ್ ನ ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಪ್ರಾಂಶುಪಾಲ ಜನಾರ್ಧನ ಕೆ.ಎನ್, ಪ್ರಾಥಮಿಕ ವಿಭಾಗದ ಮುಖ್ಯ ಗುರು ಮಾಯಿಲಪ್ಪ,ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲರಾದ ಉಮಾಕುಮಾರಿ ವಂದಿಸಿದರು.
ವಿವಿಧ ಸಮಿತಿಯ ಪದಾಧಿಕಾರಿಗಳಾದ ಎಸ್.ಡಿ.ಎಂ.ಸಿ.ಸದಸ್ಯ ಶರತ್ ಪೂಗವನ,ಕಟ್ಟಡ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ ಜೋಗಿಬೆಟ್ಟು,ಓವಿನ್ ಪಿಂಟೊ,ಜಯರಾಮ ಉಮಿಕ್ಕಳ,ನಾಗೇಶ ಕುಲಾಲ್,ಮುರಳಿ ಕೃಷ್ಣ ತಡಗಜೆ,ಕೃಷ್ಣಪ್ರಸಾದ್,ರಾಮಚಂದ್ರ ಭಟ್ ಮುಗುಳಿ,ರಾಮಕೃಷ್ಣ ಭಟ್,ಪ್ರೇಮಚಂದ್ರ ಬೆಳ್ಳಾರೆ, ಲೋಕೇಶ ಬೆಳ್ಳಾರೆ,ಕಲಾವತಿ ಹಾಗೂ ಇತರರು ಉಪಸ್ಥಿತರಿದ್ದರು.