ಸುಳ್ಯ ಒಡಬಾಯಿಯಲ್ಲಿ ಹೋಟೆಲ್ ರಿವರ್ ವ್ಯಾಲಿ ಶುಭಾರಂಭ

0

ಸುಳ್ಯ ಓಡಬಾಯಿ ಬಳಿ ಡಿ.೨೩ ರಂದು ಕೇರಳ ಶೈಲಿಯ ಖಾಧ್ಯದ ನವೀಕೃತವಾಗಿ ಹೋಟೆಲ್ ರಿವರ್ ವ್ಯಾಲಿ ಶುಭಾರಂಭ ಗೊಂಡಿತು.

ನೂತನ ಸಂಸ್ಥೆಯನ್ನು ಐಯುಎಂಎಂ ರಾಷ್ಟ್ರಿಯ ಸಮಿತಿ ಮುಖಂಡ ಎ.ಬಿ.ಬಶೀರ್ ಪಳ್ಳಂಗೊಡು ರವರು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸ್ಥಳೀಯ ಮುಖಂಡರುಗಳಾದ ಶರತ್ ಅಡ್ಕಾರ್, ದಿನೇಶ್ ಅಡ್ಕಾರ್, ಶಿವನಾಥ್ ರಾವ್ ಹಳೆಗೇಟು, ಕೆ.ಬಿ.ಇಬ್ರಾಹಿಂ, ಕೆ.ಎಂ.ಮುಸ್ತಫಾ ಜನತಾ, ಮುಜೀಬ್ ಆರ್ತಾಜೆ, ನಝಿರ್ ಶಾಂತಿನಗರ, ಶರೀಫ್ ಟಿ.ಎ., ಅಶ್ರಫ್ ಪೈಚಾರ್, ಸಂಸ್ಥೆಯ ಮಾಲಕರುಗಳಾದ ಹಮೀದ್ ಬೆಳ್ಳೂರು, ಅಬ್ದುಲ್ಲಾ ಕುಂಞಿ ಪಳ್ಳಂಜಿ, ಸರಫುದ್ದಿನ್ ಕಾಟಿಪ್ಪಾರ ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಆರ್.ಬಿ.ಬಶೀರ್ ಪೈಚಾರ್ ನೆರವೇರಿಸಿದರು.

ಈ ವೇಳೆ ಸಂಸ್ಥೆಯ ಬಗ್ಗೆ ಮಾತನಾಡಿದ ಮಾಲಕರು ನಮ್ಮಲ್ಲಿ ಕೇರಳ ಶೈಲಿಯ ಮೀನು ಪದಾರ್ಥಗಳ ಊಟ, ಚಿಕನ್ ಬಿರಿಯಾನಿ, ಕಾಡ ಬಿರಿಯಾನಿ, ಫಿಶ್ ತವಾ ಫ್ರೈ, ಕುವೈತ್ ಸ್ಪೆಷಲ್ ಮಂದಿ ಮುಂತಾದ ಸ್ವಾದ ಭರಿತ ಖಾದ್ಯಗಳು ಲಭ್ಯವಿರುತ್ತದೆ. ಹಾಗೂ ಸ್ಥಳೀಯ ಪರಿಸರಕ್ಕೆ ಆಹಾರ ಪದಾರ್ಥಗಳನ್ನು ಮನೆಗೆ ತಲುಪಿಸುವ  ವ್ಯವಸ್ಥೆಯೂ ಕೂಡ ನಮ್ಮಲ್ಲಿ ಇದೆ ಎಂದು ಹೇಳಿದರು.