ಕೆವಿಜಿ ಪಾಲಿಟೆಕ್ನಿಕ್: ಪ್ರಾಂಶುಪಾಲ ಶ್ರೀಧರ್ ಎಂ.ಕೆ ಮತ್ತು ದ್ವಿ.ದ. ಸಹಾಯಕ ಮೋನಪ್ಪ ಗೌಡರಿಗೆ ಬೀಳ್ಕೊಡುಗೆ

0

ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ವಯೋನಿವ್ರತ್ತಿ ಹೊಂದಿದ ಪ್ರಾಂಶುಪಾಲ ಶ್ರೀಧರ್ ಎಂ.ಕೆ ಮತ್ತು ದ್ವಿತೀಯ ದರ್ಜೆ ಸಹಾಯಕ ಮೋನಪ್ಪ ಗೌಡರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಡಿ. 28ರಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ.ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಿವೃತ್ತರನ್ನು ಸನ್ಮಾನಿಸಿದ ಡಾ. ರೇಣುಕಾಪ್ರಸಾದ್ ಕೆ.ವಿ. ಮಾತನಾಡಿ ಮೆಡಿಕಲ್ ಕಾಲೇಜಿನ ಇನ್ಸ್ಪೆಕ್ಷನ್ ಸಂದರ್ಭದಲ್ಲಿ ಮಾಡಿದ ಸೇವೆ, ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮ, ಕ್ಯಾಂಪಸ್ ನಲ್ಲಿ ನಡೆದ ಯಾವುದೇ ಸಮಾರಂಭದ ಸಂದರ್ಭದಲ್ಲಿ ಪಾರ್ಕಿಂಗ್ ನಿರ್ವಹಣೆ ಹೀಗೆ ಎಲ್ಲಾ ಸಂದರ್ಭಗಳಲ್ಲೂ ಬದ್ಧತೆಯಿಂದ ಕೆಲಸ ಮಾಡಿದವರು ಶ್ರೀಧರ್ ಎಂ.ಕೆ ಯವರು ಎಂದು ಅವರ ಸೇವೆಯನ್ನು ಸ್ಮರಿಸಿದರು. ಮೋನಪ್ಪ ಗೌಡರೂ ಕೂಡಾ ಅಷ್ಟೇ ನಿಷ್ಠೆಯಿಂದ ಕರ್ತವ್ಯವನ್ನು ನಿರ್ವಹಿಸಿರುವುದು, ಡಾ. ಕೆ.ವಿ.ಜಿಯವರಂತೆ ಅವರು ಸ್ವಚ್ಛತೆಗೆ ನೀಡುತ್ತಿದ್ದ ಪ್ರಾಮುಖ್ಯತೆ ಇತ್ಯಾದಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಎ ಎ.ಒ.ಎಲ್.ಇ. ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್.ಪ್ರಸಾದ್ ಮಾತನಾಡಿ ಸಂಸ್ಥೆಯ ಕೆಲಸಗಳಲ್ಲದೇ ತಮ್ಮ ಕುಟುಂಬದ ಕೆಲಸಗಳಲ್ಲೂ ಶ್ರೀಧರ್ ರವರು ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೋಳಿಸಿದ ಬಗ್ಗೆ ಶ್ಲಾಘಿಸಿ, ಕ್ರತಜ್ಞತೆ ಸಲ್ಲಿಸಿದರು. ಕಮಿಟಿ ಬಿ ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮಾತನಾಡಿ ಕ್ಯಾಂಪಸ್ ನ ಯಾವುದೇ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಶ್ರೀಧರ್ ರವರು ಶ್ರಮಜೀವಿ, ಶಿಸ್ತು, ನಂಬಿಕೆ ವಿಶ್ವಾಸಕ್ಕೆ ಪಾತ್ರಾರಾದವರು. ಮೋನಪ್ಪ ಗೌಡರು ಅಷ್ಟೇ ನಿಸ್ವಾರ್ಥದಿಂದ ಸಂಸ್ಥೆಯ ಏಳಿಗೆಗಾಗಿ ದುಡಿದವರು ಎಂದರು. ವೇದಿಕೆಯಲ್ಲಿದ್ದ ಪಾಲಿಟೆಕ್ನಿಕ್ ನ ಉಪಪ್ರಾಂಶುಪಾಲ ಅಣ್ಣಯ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶುಭ ಹಾರೈಸಿದರು. ಕಾಲೇಜಿನ ಪರೀಕ್ಷಾ ವಿಭಾಗದ ಅಧೀಕ್ಷಕ ಬಾಲಕೃಷ್ಣ ಮರಸಂಕ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ಕುಶಾಲಪ್ಪ ಗೌಡ ಮತ್ತು ಉಪನ್ಯಾಸಕ ಸುನಿಲ್ ಕುಮಾರ್ ಎನ್.ಪಿ ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು. ಶ್ರೀಮತಿ ಹರಿಣಾಕ್ಷಿ ಮೋನಪ್ಪ ಗೌಡ ಮತ್ತು ಶ್ರೀಮತಿ ಸುನಿತಾ ಶ್ರೀಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಶ್ರೀಮತಿ ಜಯಲಕ್ಷ್ಮಿ ಮತ್ತು ಪದ್ಮಾವತಿ ಪ್ರಾರ್ಥಿಸಿದರು. ಸಂಸ್ಥೆಯ ಸಿಬ್ಬಂದಿಗಳ ಪರವಾಗಿ ನಾರಾಯಣ ತೋರಣಗಂಡಿ, ಎಂ. ಎನ್. ಚಂದ್ರಶೇಖರ್, ಧನಂಜಯ ಕಲ್ಲುಗದ್ದೆ ಮತ್ತು ಮೇಘರಾಜ್ ಶುಭ ಹಾರೈಸಿದರು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ 2ನೇ ಅವಧಿಗೆ ಆಯ್ಕೆಯಾದ ಡಾ. ರೇಣುಕಾಪ್ರಸಾದ್ ಕೆ.ವಿಯವರನ್ನು ಸಂಸ್ಥೆಯ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.