ಸುಳ್ಯ ಸೈಂಟ್ ಜೋಸೆಫ್ ಶಾಲಾ ಬುಲ್ ಬುಲ್ ವಿಭಾಗದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ

0

ಮಂಗಳೂರಿನ ಲಾಲ್ ಬಾಗ್ ,ಭವನದಲ್ಲಿ ನಡೆದ ಜಿಲ್ಲಾ ಸ್ಕೌಟ್ ಸೆ.02 ರಂದು ನಡೆದ ಜಿಲ್ಲಾಮಟ್ಟದ ದೇಶಭಕ್ತಿ ಗೀತೆ ಗೀತ ಗಾಯನ ಸ್ಪರ್ಧೆಯಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಬುಲ್ ಬುಲ್ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ಅದ್ವಿತಾ ಬಿ . ಅರ್, ಇಷಾರ ಪಿ. ಅರ್ , ವೃಷ್ಠಿ ಆಳ್ವ , ಜಿಶಾ ಬಿ. ವಿ , ವೃಂದಾ ಕೆ , ತನ್ವಿ ಪಿ. ರೈ , ರವರು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸಿ ಕೊಂಡಿದ್ದು ಶಾಲಾ ಸಂಚಾಲಕರಾದ ಫಾದರ್ ವಂದನೀಯ ವಿಕ್ಟರ್ ಡಿಸೋಜಾ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮಾರವರು ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ಬುಲ್ ಬುಲ್ ಶಿಕ್ಷಕರಾದ ಶ್ರೀಮತಿ ಮರಿಯಾ ಕ್ರಾಸ್ತಾ , ಶ್ರೀಮತಿ ಚೈತ್ರಾ ಆಳ್ವ ಇವರು ತರಬೇತಿಯನ್ನು ನೀಡಿರುತ್ತಾರೆ.