ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಆಡಳಿತ ಮಂಡಳಿ ಚುನಾವಣೆ

0

ಮತ ಎಣಿಕೆ ಪೂರ್ಣ : ಫಲಿತಾಂಶ ಪ್ರಕಟ

ಒಂದು ತಂಡಕ್ಕೆ 9 ಸ್ಥಾನ – ಇನ್ನೊಂದಕ್ಕೆ 2 ಸ್ಥಾನ

ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಆಡಳಿತ ಮಂಡಳಿಯ 11 ಮಂದಿ ನಿರ್ದೇಶಕ ಸ್ಥಾನಕ್ಕೆ ಇಂದು ನಡೆದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿದೆ.

ಚುನಾವಣೆಗೆ 22 ಮಂದಿ ನಾಮಪತ್ರ ಸಲ್ಲಿಸಿದ್ದರು.
ಒಂದು ತಂಡದಿಂದ ಅಬ್ದುಲ್‌ ಖಾದರ್ ಬಾಯಂಬಾಡಿ, ಅಬ್ದುಲ್‌ ನಾಸೀರ್ ಯು.ಎ, ಅಬ್ದುಲ್‌ ರಹಿಮಾನ್‌ ಕೆ, ಅಬ್ದುಲ್‌ ರಶೀದ್ ಟಿ, ಅಬೂಬಕ್ಕರ್ ಯು.ಹೆಚ್. (ಮಂಗಳ), ಅಜರುದ್ದೀನ್ ಯು, ಹಮೀದ್ ಹೆಚ್.ಎಂ, ಹನೀಫ್ ಎನ್, ಹಸೈನಾರ್ ಬಿ, ಹುಸೈನ್ ಸಾಹೇಬ್, ಇಸ್ಮಾಯಿಲ್ ಬಿ. ಯವರು ಇನ್ನೊಂದು ತಂಡದಿಂದ ಅಬ್ದುಲ್‌ ಬಶೀರ್, ಅಬ್ದುಲ್‌ ರಹಿಮಾನ್‌, ಅಬ್ದುಲ್‌ ರಹಿಮಾನ್‌ ಬಿ.ಯು, ಅಬ್ದುಲ್‌ ರಜಾಕ್, ಅಶ್ರಫ್ ಎನ್, ಹಮೀದ್ ಕೆ.ಎಂ.(ಅಲ್ಫಾ), ಹಸೈನಾರ್ ಕೆ, ಮಹಮ್ಮದ್ ಅತಾವುಲ್ಲಾ, ಮಹಮ್ಮದ್ ಕೆ.ಎಂ, ಮಹಮ್ಮದ್ ಮುಸ್ತಫಾ, ಸುಲೈಮಾನ್ ರವರು ಸ್ಪರ್ಧಿಸಿದ್ದರು.

ಇಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಚುನಾವಣೆ ನಡೆಯಿತು . ಬಳಿಕ ಪೊಲೀಸ್ ಬಂದೋಬಸ್ತಿನೊಂದಿಗೆ ವಕ್ಫ್ ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆ ನಡೆಸಿ ರಾತ್ರಿ 8 ಗಂಟೆಗೆ ಮತ ಎಣಿಕೆ ಕಾರ್ಯ ಮುಕ್ತಾಯವಾಯಿತು.

ಅಬೂಬಕ್ಕರ್ ಯು. ಹೆಚ್. – 255 ಮತ, ಅಬ್ದುಲ್‌ ಖಾದರ್ ಬಾಯಂಬಾಡಿ – 241, ಅಬ್ದುಲ್‌ ನಾಸೀರ್ ಯು.ಎ. – 228, ಅಬ್ದುಲ್‌ ರಹಿಮಾನ್‌ ಕೆ.- 224, ಹಮೀದ್ ಹೆಚ್.ಎಂ.- 222, ಅಜರುದ್ದೀನ್ – 217, ಹನೀಫ್ ಎನ್.- 208, ಇಸ್ಮಾಯಿಲ್ ಬಿ. – 204, ಅಬ್ದುಲ್‌ ಬಶೀರ್- 202, ಹಸೈನಾರ್ ಬಿ. – 199, ಹಮೀದ್ ಕೆ ಎಂ – 196 ಮತ ಗಳಿಸಿ ವಿಜಯಿಗಳಾದರು.

ಹುಸೈನ್ ಸಾಹೇಬ್ 196, ಹಸೈನಾರ್ ಕೆ 195, ಅಬ್ದುಲ್‌ ರಶೀದ್ 195, ಅಬ್ದುಲ್‌ ರಹಿಮಾನ್‌ 183, ಮಹಮ್ಮದ್ ಅತ್ತಾವುಲ್ಲಾ 172, ಅಬ್ದುಲ್‌ ರಜಾಕ್ 172, ಅಶ್ರಫ್ ಎನ್169, ಮಹಮ್ಮದ್ ಮುಸ್ತಫಾ ಎಂ 168, ಮಹಮ್ಮದ್ ಕೆ ಎಂ 166, ಅಬ್ದುಲ್‌ ರಹಿಮಾನ್‌ ಬಿ ಯು164, ಸುಲೈಮಾನ್ 163 ಮತಗಳನ್ನು ಪಡೆದು ಪರಾಭವಗೊಂಡರು.

ಬೆಳ್ಳಾರೆ ಜಮಾಅತ್ ವ್ಯಾಪ್ತಿಗೆ ಒಳಪಟ್ಟ 525 ಮಂದಿ ಮತದಾರರಿದ್ದು 411 ಮಂದಿ ಮತ ಚಲಾವಣೆ ಮಾಡಿದ್ದರು.
ಅದರಲ್ಲಿ 10 ಮತಗಳು ಅಸಿಂಧುವಾಗಿದೆ ಎಂದು ಚುನಾವಣಾಧಿಕಾರಿ ದ.ಕ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಅಬೂಬಕ್ಕರ್ ತಿಳಿಸಿದ್ದಾರೆ.