ಕದಿಕಡ್ಕ: ಚಾಲಕನ ನಿಯಂತ್ರಣ ತಪ್ಪಿ ಕಂಪೌಂಡ್ ಗೆ ಈಚರ್ ಲಾರಿ ಢಿಕ್ಕಿ – ಜಖಂ

0

ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿಯೊಂದು ರಸ್ತೆ ಬದಿಯ ಕಂಪೌಂಡ್ ಗೆ ಢಿಕ್ಕಿ ಹೊಡೆದ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಸೆ.10ರಂದು ಬೆಳಿಗ್ಗೆ ಸಂಭವಿಸಿದೆ.

ಮೈಸೂರಿನಿಂದ ಮಂಗಳೂರಿಗೆ ತರಕಾರಿ ಹೇರಿಕೊಂಡು ಬರುತ್ತಿದ್ದ ಈಚರ್ ಲಾರಿ ಕದಿಕಡ್ಕದ ಬಿ.ಸಿ.ಸಿ. ಚಿಕನ್ ಸೆಂಟರ್ ಬಳಿಯ ತಿರುವಿನಲ್ಲಿರುವ ಸಿದ್ಧಿಕ್ ಎಂಬವರ ಮನೆಯ ಕಂಪೌಂಡ್ ಗೆ ಢಿಕ್ಕಿ ಹೊಡೆದಿದ್ದು, ಮನೆ ಮಾಲಿಕರಿಗೆ ನಷ್ಟ ಸಂಭವಿಸಿದ್ದು, ಲಾರಿಯ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.