ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಮುಹೂರ್ತದ ಮರ ಕಡಿಯುವ ಹಾಗೂ ‌ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಗಬ್ಬಲ್ಕಜೆ ತರವಾಡು ಸಂಬಂಧಿಸಿದ ಏಣಾವರ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಮುಹೂರ್ತದ ಮರ ಕಡಿಯುವ ಹಾಗೂ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಸೆ.11 ರಂದು ನಡೆಯಿತು.


ದೈವಸ್ಥಾನದಲ್ಲಿ ದೈವಜ್ಞರ ಅಷ್ಟ ಮಂಗಲ ಚಿಂತನೆಯ ಪ್ರಕಾರ ನವೀಕರಣದ ಪುನರ್ ಪ್ರತಿಷ್ಠೆಯ ಜೀರ್ಣೋದ್ಧಾರದ ಕುರಿತು
ಬೆಳಗ್ಗೆ ಕುತ್ತಿಕೋಲು ತಂಬುರಾಟ್ಟಿ ಶ್ರೀ ಭಗವತಿ ಕ್ಷೇತ್ರದ ಸ್ಥಾನಿಕರ ಮಾರ್ಗದರ್ಶನದಲ್ಲಿ ಭಾರತೀಯ ತೀಯ ಸಮಾಜದ ಗ್ರಾಮ ಸಮಿತಿ ಆಲೆಟ್ಟಿ ಇವರ ನೇತೃತ್ವದಲ್ಲಿ ಸ್ಥಳೀಯ ನಾರ್ಕೋಡು ನಿವಾಸಿ ಜೆ.ಕೆ.ರೈ ಯವರ ತೋಟದಲ್ಲಿ ಮುಹೂರ್ತದ ಮರ ಕಡಿಯುವ ಕಾರ್ಯವನ್ನು ವಿಶ್ವಕರ್ಮ ಭೋಜರಾಯ ಆಚಾರ್ಯ ರವರು ನೆರವೇರಿಸಿದರು.


ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ಸತೀಶ್ ಗುಂಡ್ಯ ಮತ್ತು ವಯನಾಟ್ ಕುಲವನ್ ದೈವದ ಪಾತ್ರಿ ಶಿವರಾಮ ಆಡಿಂಜ (ಉದುಮ) ರವರ ನೇತೃತ್ವದಲ್ಲಿ ಬಾಲಾಲಯದಲ್ಲಿ ದೈವದ ಆಯುಧಗಳನ್ನು ಪ್ರತಿಷ್ಠಾಪಿಸಲಾಯಿತು. ದೈವದದರ್ಶನ ಪಾತ್ರಿಯವರಿಂದ ಅಭಯದ ನುಡಿಯಾಗಿ ಪ್ರಸಾದವಿತರಣೆಯಾಯಿತು. ಭಾರತೀಯ ತೀಯ ಸಮಾಜ ಬಾಂಧವರು ಸಹಕರಿಸಿದರು.


ಈ ಸಂದರ್ಭದಲ್ಲಿ ಕುಟುಂಬಸ್ಥರ ಪರವಾಗಿ ಜಿ.ಕೆ ಉಮೇಶ್ ಕೂಟೇಲು, ಸತ್ಯಪ್ರಸಾದ್ ಗಬ್ಬಲ್ಕಜೆ, ಏಣಾವರ ಪರಿಸರದ ಬೈಲಿನವರು, ಗ್ರಾಮದ ಕೋಲ್ಚಾರು, ಕುಂಚಡ್ಕ,ಕಲ್ಲೆಂಬಿ,
ನಾರ್ಕೋಡು, ಭೂತಕಲ್ಲು, ನಡುಮನೆ, ಬಾಳೆಹಿತ್ಲು, ಭೂತಕಲ್ಲು‌,ಅಡ್ಪಂಗಾಯ,ಗುಂಡ್ಯ ಮನೆತನದ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.