ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ವರ್ಷದ ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇಕಡಾ 1೦೦ ಫಲಿತಾಂಶ ದಾಖಲಾಗಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 68 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿರುತ್ತಾರೆ. ಅಂತಿಮ ವರ್ಷದ ಕು. ಅನುಜ್ಞಾ ಬಿ.ಎಂ. ಇವರು ಶೇಕಡಾ ೮೨.56 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಈಕೆ ಕೆ.ವಿ.ಜಿ. ದಂತಮಹಾವಿದ್ಯಾಲಯದ ಆಡಳಿತಾಧಿಕಾರಿ ಬಿ.ಟಿ. ಮಾಧವ ಮತ್ತು ಕೆ.ವಿ.ಜಿ ಪಾಲಿಟೆಕ್ನಿಕ್ ಉದ್ಯೋಗಿ ಜಯಮಣಿ ಮಾಧವ ಇವರ ಪುತ್ರಿ. ಈ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಮತ್ತು ಫಲಿತಾಂಶ ದಾಖಲಾಗುವಲ್ಲಿ ಸಹಕರಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕಾಲೇಜಿ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಡಾ| ರೇಣುಕಾಪ್ರಸಾದ ಕೆ.ವಿ., ಸದಸ್ಯರಾದ ಡಾ| ಜ್ಯೋತಿ ಆರ್. ಪ್ರಸಾದ್, ಮುಖ್ಯ ಕಾರ್ಯನಿರ್ವಹಣಧಿಕಾರಿ ಡಾ| ಉಜ್ವಲ್ ಊರುಬೈಲು, ಪ್ರಾಂಶುಪಾಲರಾದ ಡಾ| ಮೋಕ್ಷಾನಾಯಕ್ ಮತ್ತು ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ| ಮನೋಜ್ ಕುಮಾರ್ ಅಡ್ಡಂತಡ್ಕ ಇವರುಗಳು ಅಭಿನಂದಿಸಿರುತ್ತಾರೆ.