ಸುಳ್ಯ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ- ಆಕರ್ಷಕ ನೃತ್ಯ ವೈಭವ

0

ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ 55ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಪ್ರತಿದಿನ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸೆ.21ರಂದು ವಿದುಷಿ ಸುಜಾತ ಮುಳ್ಳೇರಿಯ ಮತ್ತು ಬಳಗದ ಗಜಾನನ ನಾಟ್ಯಾಂಜಲಿ ಕಲಾಕ್ಷೇತ್ರ ಇದರ ಕಲಾವಿದರಿಂದ
ನೃತ್ಯ ವೈಭವ ಪ್ರದರ್ಶನಗೊಂಡಿತು. ನೂರಾರು ಸಂಖ್ಯೆಯಲ್ಲಿ ಪ್ರೇಕ್ಷಕ ಕಲಾಭಿಮಾನಿಗಳು ಸೇರಿದ್ದರು.