ಮಕ್ಕಳು – ಪುರುಷ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜನೆ
ಪೆರುವಾಜೆ ಡಾ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ವಿವಿಧ ಸಂಘ -ಸಂಸ್ಥೆಗಳ ಸಹಕಾರದೊಂದಿಗೆ ಪೇರಜ್ಜ ರಮೇಶ್ ಶೆಟ್ಟಿ ಸ್ಮರಣಾರ್ಥ ಕೆಸರ್ಡ್ ಒಂಜಿ ದಿನ (ಕೆಸರುಗದ್ದೆ ಕ್ರೀಡಾಕೂಟ) ಕಾರ್ಯಕ್ರಮವು ಕಾಲೇಜಿನ ಮುಂಭಾಗದ ಪೇರಜ್ಜ ಮನೆಯಲ್ಲಿ ಸೆ.24ರಂದು ಜರುಗಲಿದೆ.
ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲರಾದ ದಾಮೋದರ ಕಣಜಾಲು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಸ್. ಅಂಗಾರ, ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ದ.ಕ. ಜಿಲ್ಲಾ ಯುವಜನ ಒಕ್ಕೂಟದ ಸದಸ್ಯ ರಾಕೇಶ್ ರೈ ಕೆಡೆಂಜಿ, ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ, ಮುಕ್ಕೂರು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ವಾಧ್ಯಕ್ಷ ಸುನಿಲ್ ರೈ ಪುಡ್ಕಜೆ, ಪೆರುವಾಜೆ ಭಾವೈಕ್ಯ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಮಠತ್ತಡ್ಕ, ಅಭಿಷೇಕ್ ಶೆಟ್ಟಿ ಪೇರಜ್ಜ ಮನೆ, ಉದ್ಯಮಿ ಮಿಥುನ್ ಶೆಣೈ , ಬೆಳ್ಳಾರೆ ಜೇಸಿ ಅಧ್ಯಕ್ಷ ಜೇಸಿ ರವೀಂದ್ರನಾಥ ಶೆಟ್ಟಿ, ಬೆಳ್ಳಾರೆ ರೋಟರಿ ಕ್ಲಬ್ ಟೌನ್ ಅಧ್ಯಕ್ಷ ಶಶಿಕುಮಾರ್ ಉಪಸ್ಥಿತರಿರಲಿದ್ದಾರೆ.
ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗಜಗ್ಗಾಟ , ವಾಲಿಬಾಲ್, ಹಿಮ್ಮುಖ ಓಟ, ಗೂಟ ಓಟ, ಹಾಳೆ ಎಳೆಯುವ ಸ್ಪರ್ಧೆ, ಟಪ್ಪಂಗಾಯಿ, ರಿಲೇ ಓಟದ ಸ್ಪರ್ಧೆ, ಓಟದ ಸ್ಪರ್ಧೆಗಳು, ಮಡಿಕೆ ಒಡೆಯುವ ಸ್ಪರ್ಧೆ ಜರುಗಲಿದ್ದು, ಮಹಿಳೆಯರಿಗೆ ಹಗ್ಗಜಗ್ಗಾಟ, ತ್ರೋಬಾಲ್, ಹಿಮ್ಮುಖ ಓಟ, ಗೂಟ ಓಟ, ಹಾಳೆ ಎಳೆಯುವ ಸ್ಪರ್ಧೆ, ಸಂಗೀತ ಕುರ್ಚಿ, ರಿಲೇ ಓಟದ ಸ್ಪರ್ಧೆ, ಓಟದ ಸ್ಪರ್ಧೆಗಳು, ಮಡಿಕೆ ಒಡೆಯುವ ಸ್ಪರ್ಧೆಗಳು ನಡೆಯಲಿದೆ. ಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ, ನಿವೃತ್ತ ಬ್ಯಾಂಕ್ ಅಧಿಕಾರಿ ಭೋಜರಾಜ ಶೆಟ್ಟಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ಲ. ವಿಠಲ ಶೆಟ್ಟಿ, ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಂತರ ಯೋಜನಾಧಿಕಾರಿ ನಾಗೇಶ್, ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಗೌಡ ಬೆಳ್ಳಾರೆ, ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ನೆಟ್ಟಾರು ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಪದ್ಮನಾಭ ಕೋಡಿಬೈಲು, ಪೆರುವಾಜೆ ಸರ್ಕಾರಿ ಪ್ರ.ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸುದೇವ ಪೆರುವಾಜೆ, ಬೆಳ್ಳಾರೆ ಜೇಸಿಐ ನಿಯೋಜಿತ ಅಧ್ಯಕ್ಷ ಜಗದೀಶ್ ರೈ ನಾಗಂಡ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.