ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು : ಪಂಜದಲ್ಲಿ ಉಪವಾಸ ಸತ್ಯಾಗ್ರಹ

0

ಪಂಜ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ಮತ್ತು ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ ತುರ್ತು ಚಿಕಿತ್ಸೆಗೆ ಖಾಯಂ ಸಿಬ್ಬಂದಿಗಳು ಬೇಕು ಎಂದು ಉಪವಾಸ ಸತ್ಯಾಗ್ರಹ
ಗಾಂಧಿ ಜಯಂತಿಯಂದು ನಡೆಯಿತು.

ಮಹಾತ್ಮ ಗಾಂಧಿ ವಿದ್ಯಾಪೀಠ,ಗ್ರಾಮ ಸ್ವರಾಜ್ಯ ಪಂಜ ಮುಖ್ಯಸ್ಥರಾದ ಪುರುಷೋತ್ತಮ ಮುಡೂರು ಮತ್ತು ಜಿನ್ನಪ್ಪ ಕೋಟ್ಯಡ್ಕ ರವರ ಮುಂದಾಳತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ದೀಪ ಬೆಳಗಿಸಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರು ಉಪಸ್ಥಿತರಿದ್ದರು.ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ , ಗ್ರಾಮ ಪಂಚಾಯತ್ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಮೊದಲಾದವರು ಭೇಟಿ ನೀಡಿದರು. ಇದೇ ವೇಳೆ ಸಹಿ ಸಂಗ್ರಹ ಅಭಿಯಾನ ನಡೆಯಿತು. ನಿವೃತ್ತ ಶಿಕ್ಷಕ ಪದ್ಮನಾಭ ಗೌಡ ಎಂ , ಸುಬ್ರಹ್ಮಣ್ಯ ಪತ್ರಕರ್ತ ಸಂಘದ ಅಧ್ಯಕ್ಷ ವಿಶ್ವನಾಥ ನಡುತೋಟು , ಲಕ್ಷ್ಮೀಶ ಗಬ್ಲಡ್ಕ ,ರವಿನಾಗತೀರ್ಥ ,
ಧರ್ಮಪಾಲ ಕಕ್ಯಾನ ,ನೇಮಿರಾಜ ಪಲ್ಲೋಡಿ, ದಾಮೋದರ ಪಲ್ಲೋಡಿ ವೆಂಕಟ್ರಮಣ ಭಟ್ ಸಂಗಾತಿ ಮೊದಲಾದವರು ಅಭಿಪ್ರಾಯ ಮಂಡಿಸಿದರು.