ಅ.11-15 : ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಉಚಿತ ಮಕ್ಕಳ ಭಜನಾ ತರಬೇತಿ ಶಿಬಿರ

0

ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾಮಂದಿರ ,
ಮಂಜುನಾಥೇಶ್ವರ ಭಜನಾಮಂಡಳಿ,
ತಾಲೂಕು ಭಜನಾ ಪರಿಷತ್ ಇದರ ಸಹಯೋಗಲ್ಲಿ ಅ.11 ರಿಂದ 15 ರ ತನಕ 5 ದಿನಗಳ ಕಾಲ ಮಕ್ಕಳ ಭಜನಾ ತರಬೇತಿ ಶಿಬಿರವು ಬೆಟ್ಟಂಪಾಡಿ ಭಜನಾ ಮಂದಿರದಲ್ಲಿ ನಡೆಯಲಿರುವುದು.

ಕುಳಿತು ಹಾಗೂ ಕುಣಿತ ಎರಡು ವಿಭಾಗದಲ್ಲಿ ಭಜನಾ ಕಮ್ಮಟವು ನಡೆಯಲಿದ್ದು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಒಂದನೇ ತರಗತಿಯಿಂದ 10 ನೇ ತರಗತಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಇರುವುದು. ಬೆಳಗ್ಗಿನಿಂದ ಸಂಜೆಯ ತನಕ ಶಿಬಿರ ನಡೆಯಲಿದ್ದು ಸಂಪೂರ್ಣ ಉಚಿತವಾಗಿರುತ್ತದೆ. ಉಪಹಾರ ಹಾಗೂ ಭೋಜನದ ವ್ಯವಸ್ಥೆ ಸಂಘಟಕರು ನಿರ್ವಹಿಸಲಿದ್ದಾರೆ.