ನೆಹರು ಮೆಮೋರಿಯಲ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಫಾರಂ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನ ಉದ್ಘಾಟನಾ ಕಾರ್ಯಕ್ರಮ ಅ.೧೨ ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್ ಎಂ.ಎಂ.ರವರು ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಂಗೂರ ಡಿಜಿಟಲ್ನ ಮಾಲಿಕರಾದ ಶ್ರೀಕೃಷ್ಣಶರ್ಮ, ವಿದ್ಯಾರ್ಥಿಗಳಲ್ಲಿ ಸ್ವ-ಉದ್ಯೋಗ ಆರಂಭಿಸುವ ಬಗ್ಗೆ ಮತ್ತು ಅದರ ಬೆಳವಣಿಗೆಗೆ ಶ್ರಮಿಸುವ ವಿಧಾನಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ., ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಚಾಲಕಿ ಡಾ. ಮಮತಾಕೆ. ಉಪಸ್ಥಿತರಿದ್ದರು.
ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರು ಹಾಗೂ ಫಾರಂ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ನ ಸಂಚಾಲಕಿ ಶ್ರೀಮತಿ ಅನಂತಲಕ್ಷ್ಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಭಾಗದ ಸಹಾಯಕ ಅಧ್ಯಾಪಕರುಗಳಾದ ಹರಿಪ್ರಸಾದ್ ಎ.ವಿ., ಶ್ರೀಮತಿ ಲೀನಾ ವೈ.ಎಸ್. ಹಾಗೂಶ್ರೀಮತಿ ಮೀನಾಕ್ಷಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ಪ್ರಥಮ ಬಿಬಿಎ ವಿದ್ಯಾರ್ಥಿಗಳಿಗೆಹಲವಾರು ಚಟುವಟಿಕೆಗಳನ್ನು ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತೃತೀಯ ಬಿಬಿಎ ಯ ಆಯಿಷತ್ ಅಸ್ರೀನಾ ಸ್ವಾಗತಿಸಿ, ದ್ವಿತೀಯ ಬಿಬಿಎಯ ಮೇಘನಾ ವಂದಿಸಿದರು. ತೃತೀಯ ಬಿಬಿಎ ಯ ಫಾತಿಮತ್ ಶೈಮಾ ನಿರೂಪಿಸಿದರು.